Friday, July 1, 2022

Latest Posts

ರಾಜ್ಯ ಲಾಕ್: ಒಳಾಂಗಣ ಚಿತ್ರೀಕರಣಕ್ಕೂ ಅವಕಾಶವಿಲ್ಲ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಕೊರೊನಾ ಸೊಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ರಾಜ್ಯ ಸರ್ಕಾರ 14 ದಿನಗಳ ಕಾಲ ಕರ್ನಾಟಕ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದೆ. ಈ ಲಾಕ್​ಡೌನ್​ ವೇಳೆ ಧಾರಾವಾಹಿ ಹಾಗೂ ಸಿನಿಮಾ ಶೂಟಿಂಗ್​ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
ಕಳೆದ ಬಾರಿ ಕೊರೋನಾ ಕರ್ಫ್ಯೂ ವೇಳೆ ಬೆಳಗ್ಗೆ 6-12 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಿತ್ತು. ಅಲ್ಲದೆ, ಜನರ ಓಡಾಟಕ್ಕೂ ಅಷ್ಟಾಗಿ ಕಠಿಣ ನಿರ್ಬಂಧ ಇರಲಿಲ್ಲ. ಹೀಗಾಗಿ, ಧಾರಾವಾಹಿಗಳನ್ನು ಒಳಾಂಗಣದಲ್ಲಿ ಶೂಟಿಂಗ್​ ನಡೆಸುತ್ತಿದ್ದವು. ಆದರೆ, ಈ ಬಾರಿ ಸರ್ಕಾರ ಅದನ್ನು ಹಿಂಪಡೆದಿದೆ.
ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳು ಇಂಡೋರ್​ ಶೂಟಿಂಗ್​ ಮಾಡುತ್ತಿವೆ. ಇದಕ್ಕೆ ಏನಾದರೂ ನಿರ್ಬಂಧ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ , ಈ ಬಾರಿ ಒಳಾಂಗಣ ಶೂಟಿಂಗ್​ಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಿಂದ ಒಳಾಂಗಣದಲ್ಲಿ ಶೂಟಿಂಗ್​ ಮಾಡುತ್ತಿರುವವರು ಈಗಲೇ ಶೂಟಿಂಗ್​ ನಿಲ್ಲಿಸಬೇಕಾಗಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss