ದೆಹಲಿ ಭೇಟಿ ಸಂದರ್ಭ ರಾಜ್ಯ ರಾಜಕಾರಣದ ಕುರಿತು ಚರ್ಚಿಸಲಾಗುವುದು : ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ಹಾವೇರಿ :

ಅಭಿವೃದ್ಧಿ ಹಾಗೂ ಕೆಲ ಕಾಮಗಾರಿಗಳ ಕುರಿತು ಚಿರ್ಚಿಸುವುದಕ್ಕಾಗಿ ದೆಹಲಿಗೆ ತೆರಳಲಾಗುತ್ತಿದೆ. ಈ ಸಂದರ್ಭದಲ್ಲಿ ಖಂಡಿತವಾಗಿಯೂ ರಾಜಕೀಯ ಚರ್ಚೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ಶಿಗ್ಗಾವಿಯಲ್ಲಿ ಛತ್ರಪತಿ ಶಿವಾಜಿ ಸಭಾಭವನಕ್ಕೆ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ದೆಹಲಿ ಭೇಟಿ ಸಂದರ್ಭದಲ್ಲಿ ಚುನಾವಣೆ ತಯಾರಿ ಕುರಿತು ಕೂಡಾ ಚರ್ಚೆ ಮಾಡಲಿದ್ದೇವೆ. ರಾಜ್ಯ ಬಿಜೆಪಿ ಅಧ್ಯಕ್ಷರೊಂದಿಗೆ ರಾಜ್ಯ ರಾಜಕಾರಣದ ಕುರಿತು ಚರ್ಚಿಸಲಾಗುವುದು ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೊರೋನಾ ಭೀತಿ ಹಿನ್ನೆಲೆ ಹೊಸ ನಿಯಮಗಳ ಜಾರಿ ಮಾಡುವ ವಿಚಾರವಾಗಿ ಟೆಸ್ಟ್ ಗಳನ್ನು ಹೆಚ್ಚಿಸುತ್ತೇವೆ, ಬೂಸ್ಟರ್ ಡೋಸ್ ಕೂಡುವುದನ್ನು ಜಾಸ್ತಿ ಮಾಡಿತ್ತೇವೆ. ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು, ಆಕ್ಸಿಜನ್ ಸೌಲಭ್ಯ ಹೆಚ್ಚಿಸುವುದು, ಐಸಿಯುಗಳನ್ನು ಅಪ್ ಡೇಟ್ ಮಾಡುವುದಕ್ಕೆ ಕ್ರಮ, ತಂತ್ರಜ್ಞಾನಗಳನ್ನು ಅಳವಡಿಸುವುದಕ್ಕೆ ಕ್ರಮ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಕಡ್ಡಾಯ ಮಾಡುವುದಕ್ಕೆ ಕ್ರಮ, ಏರ್ ಪೋರ್ಟ್ ಹಾಗೂ ಬಸ್ ಸ್ಟಾಪ್ ಗಳಲ್ಲಿ ಮೊದಲಿನಂತೆ ನಿಗಾ ಇಡಲು ಸೂಚನೆ ನೀಡಿದ್ದೇನೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!