Sunday, December 3, 2023

Latest Posts

ಗೃಹ ಜ್ಯೋತಿ ಯೋಜನೆ ಘೋಷಣೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್: ಜೂ.1 ರಿಂದಲೇ ವಿದ್ಯುತ್ ದರ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗೃಹಜ್ಯೋತಿ ಯೋಜನೆ ಘೋಷಣೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್‌ ದರ ಏರಿಕೆ ಮಾಡಿ ಶಾಕ್‌ ನೀಡಿದೆ. ಜೂನ್‌ 1ರಿಂದಲೇ ಅನ್ವಯವಾಗುವಂತೆ ವಿದ್ಯುತ್‌ ದರ ಹೆಚ್ಚಳ ಮಾಡಲಾಗಿದೆ.

ಪ್ರತಿ ಯೂನಿಟ್‌ ವಿದ್ಯುತ್‌ ದರ 70 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ನೀಡಿದೆ.
ಮೇ 12ರಂದು ಕೆಇಆರ್‌ಸಿ ವಿದ್ಯುತ್‌ ಪರಿಷ್ಕರಣೆ ಮಾಡಿತ್ತು. ವಿದ್ಯುತ್‌ ಸರಬರಾಜು ಕಂಪನಿಗಳಿಗೆ ನಷ್ಟದ ಕಾರಣ ನೀಡಿ ವಿದ್ಯುತ್‌ ದರ ಹೆಚ್ಚಳ ಮಾಡಿದ್ದು, ಪರಿಷ್ಕೃತ ವಿದ್ಯುತ್‌ ದರ ಜೂ.1ರಿಂದಲೇ ಜಾರಿಯಲ್ಲಿದೆ.

ಈ ಹಿಂದೆ ಏಪ್ರಿಲ್‌ 1ರಿಂದ ಹೊಸ ದರ ಅನ್ವಯವಾಗಲಿದೆ ಎಂದು ಕೆಇಆರ್‌ಸಿ ಹೇಳಿತ್ತು. ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ದರ ಹೆಚ್ಚಳ ಆದೇಶಕ್ಕೆ ತಡೆ ನೀಡಿತ್ತು. ಇದೀಗ ಹೊಸ ಪರಿಷ್ಕೃತ ದರವನ್ನು ಜೂನ್ 1ರಿಂದ ಅನ್ವಯವಾಗುವಂತೆ ಅದೇಶ ಪ್ರಕಟಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!