Saturday, August 13, 2022

Latest Posts

ಡಿಜಿಟಲೀಕರಣದತ್ತ ಮುಖಮಾಡಿದ ರಾಜ್ಯ ಮಹಿಳಾ ಆಯೋಗ: ಇನ್ಮುಂದೆ Whatsapp​​ನಲ್ಲೇ ನೀಡಬಹುದು ದೂರು!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯ ಮಹಿಳಾ ಆಯೋಗ ಡಿಜಿಟಲೈಸ್ ಕಡೆ ಮುಖಮಾಡಿದ್ದು, ಮಹಿಳೆಯರು ಇನ್ಮುಂದೆ ತಮ್ಮ ಸಮಸ್ಯೆ ಹೇಳೋಕೆ ಕಚೇರಿಗೆ ಹೋಗಬೇಕಿಲ್ಲ.ಬದಲಾಗಿ ಕೂತಲ್ಲೇ Whatsapp ಮೂಲಕ ಸಮಸ್ಯೆಯ ಕುರಿತು ದೂರು ನೀಡಬಹುದು.
ಹೌದು, ಈ ಬಗ್ಗೆ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ದಿಟ್ಟ ಹೆಜ್ಜೆ ಇಟ್ಟಿದ್ದು, ದಿನಕ್ಕೆ ನೂರಾರು ಕೇಸ್​ಗಳು ಮಹಿಳಾ ಆಯೋಗಕ್ಕೆ ಬರುತ್ತಿವೆ. ಅಲ್ಲದೆ ಬೆಳಗ್ಗೆ 11 ಗಂಟೆಗೆ ಬಂದರೆ ಸಂಜೆ 7 ಗಂಟೆವರಗೂ ಕ್ಯೂ ಇರುತ್ತೆ. ಕೆಲವರಿಗೆ ದೂರು ನೀಡಲು ಸಮಯ ಸಿಗುವುದಿಲ್ಲ. ಅಲ್ಲದೆ ನೇರವಾಗಿ ಅಧ್ಯಕ್ಷೆಯನ್ನು ಭೇಟಿ ಮಾಡಲು ಅವಕಾಶ ಸಿಗಲ್ಲ. ಹೀಗಾಗಿ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಈ ಪ್ಲ್ಯಾನ್ ಮಾಡಿದ್ದಾರೆ.
ಇನ್ನು ಮಹಿಳೆಯರಿಗೆ ಸಮಸ್ಯೆ ಎದುರಾದಾಗ ವಾಟ್ಸ್​ಆಯಪ್​ ಮೂಲಕ ದುಃಖ ದುಮ್ಮಾನಗಳನ್ನ ಶೇರ್ ಮಾಡಿಕೊಳ್ಳಬಹುದು. ಅಲ್ಲದೆ ತಮ್ಮ ದೂರಿಗೆ ಸಂಬಂಧಿಸಿದ ಆಡಿಯೋ, ವಿಡಿಯೋಗಳನ್ನ ಕೂಡ ಕಳಿಸಬಹುದು. ಇದಕ್ಕಾಗಿ Whatsapp ಮೂಲಕವೇ ದೂರುದಾರರಿಗೆ ಕೌನ್ಸಿಲಿಂಗ್ ಡೇಟ್ ಕೊಡುತ್ತಾರೆ. ದಿನಾ ಬಂದು ಕಾಯುವುದಕ್ಕಿಂತ ನಿಗದಿತ ದಿನದಂದು ಬರುವುದು ಉತ್ತಮ. ಇದರಿಂದ ಕಚೇರಿಯಲ್ಲೂ ನೂಕು ನುಗ್ಗಲು ಇರಲ್ಲ, ಹಾಗೆ ಜನರಿಗೂ ತೊಂದರೆಯಾಗಲ್ಲ ಅನ್ನೋದು ಪ್ರಮಿಳಾ ಅವರ ಆಲೋಚನೆ.
ಈಗ ನೇರವಾಗಿ ಹಾಗೂ ಇ-ಮೇಲ್ ಮೂಲಕ ಮಾತ್ರ ದೂರು ದಾಖಲಿಸಿಕೊಳ್ಳಲಾಗುತ್ತಿದೆ. ಸದ್ಯದಲ್ಲೇ ದೂರುಗಳನ್ನ ನೀಡಲು ಮಹಿಳಾ ಆಯೋಗ Whatsapp ನಂಬರ್ ನೀಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss