ವಿಶ್ವದಾಖಲೆಗಾಗಿ ರಾಜ್ಯಾದ್ಯಂತ ಯೋಗಥಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಾಖಲೆಗಾಗಿ ಇಂದು ರಾಜ್ಯಾದ್ಯಂತ ಯೋಗಥಾನ್ ನಡೆಯುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೋಗಥಾನ್ ನಡೆಯುತ್ತಿದ್ದು, ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಮಂದಿ ಯೋಗಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಕೊಡಗು, ಶಿವಮೊಗ್ಗ, ಧಾರವಾಡ, ಬಾಗಲಕೋಟೆ, ಹಾವೇರಿ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಯೋಗಥಾನ್ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದಲೇ ಯೋಗ ಪ್ರಾರಂಭವಾಗಿದೆ. ಹಾವೇರಿಯಲ್ಲಿ ಗಿನ್ನಿಸ್ ದಾಖಲೆಗಾಗಿ ಏಕಕಾಲಕ್ಕೆ 12 ಸಾವಿರ ವಿದ್ಯಾರ್ಥಿಗಳು ಯೋಗಥಾನ್‌ಗಾಗಿ ಸೇರಿದ್ದರು. ಇನ್ನು ಶಿವಮೊಗ್ಗದಲ್ಲಿಯೂ ಯೋಗಥಾನ್ ಆಯೋಜನೆ ಮಾಡಿದ್ದು, ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಬಾಗಲಕೋಟೆಯಲ್ಲಿ ಯೋಗಥಾನ್‌ಗೆ 20 ಸಾವಿರ ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದು, ಪತಂಜಲಿ ಸಂಸ್ಥೆಯಿಂದ 84 ಯೋಗ ಬೋಧಕರನ್ನು ನಿಯೋಜನೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!