Sunday, August 14, 2022

Latest Posts

ಬೈಕು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ: 5 ಲಕ್ಷ ಮೊತ್ತದ ಹತ್ತು ಬೈಕು ವಶಕ್ಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಬಾಗಲಕೋಟೆ:

ಜಿಲ್ಲೆಯ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿತರಿಂದ ಒಟ್ಟು ಹತ್ತು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರಿಂದ ವಶಪಡಿಸಿಕೊಂಡಿರುವ ಬೈಕುಗಳಲ್ಲಿ ಏಳು ಸ್ಪೇಲೆಂಡರ್ ಉಳಿದವು ಎಚ್ಎಫ್ ಡಿಲಕ್ಸ್ ಬೈಕುಗಳಾಗಿವೆ. ರಬಕವಿಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸಾರ್ ತಿಳಿಸಿದ್ದಾರೆ.
ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಸಿಬ್ಬಂದಿ ಹಾಗೂ ಪೊಲೀಸ್ ಠಾಣಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.
ರಬಕವಿ, ಮಹಾಲಿಂಗಪೂರ, ಮುಧೋಳ,ಲೋಕಾಪೂರ,ಕಟಕೋಳ, ಗೋಕಾಕಗಳಲ್ಲಿ ಬೈಕುಗಳನ್ನು ಕಳ್ಳತನ ಮಾಡುತ್ತಿದ್ದರು. ರಬಕವಿಯ ಆನಂದ ಮಲಕಪ್ಪ ಕೋರಿಯವರ ಮನೆಯ ಮುಂದೆ ನಿಲ್ಲಿಸಿದ ಸ್ಪಲೆಂಡರ್ ಬೈಕು ಕಳ್ಳತನವಾದ ಬಗ್ಗೆ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಲೋಕೇಶ ಜಗಲಾಸಾರ್ ಅವರ ಡಿಎಸ್ಪಿ ಎಂ.ಪಾಂಡುರಂಗಯ್ಯ, ಬನಹಟ್ಟಿ ಸಿಪಿಐ ಜಿ.ಕರುಣೇಶಗೌಡ ಮಾರ್ಗದರ್ಶನದಲ್ಲಿ ಪಿಎಸ್ಐ ರಾಜು .ವೈ.ಬೀಳಗಿಯವರ ನೇತೃತ್ವದ ತಂಡ ಕಳ್ಳತನ ಮಾಡಿದ್ದ ರಬಕವಿಯ ಇಬ್ಬರು ಆರೋಪಿಗಳನ್ನು ಬಂಧಿಸಿ ಅಂದಾಜು 5 ಲಕ್ಷ ಮೊತ್ತದ ಹತ್ತು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss