ಏಕದಿನ ಕ್ರಿಕೆಟ್‌ ನಲ್ಲಿ ದಾಖಲಾಯ್ತು ತ್ರಿಶತಕ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸುವುದು ಬ್ಯಾಟ್ಸ್‌ಮನ್‌ ಪಾಲಿಗೆ ವಿಶೇಷ ಸಾಧನೆ. ಅದರಲ್ಲಿಯೂ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾದರೆ ಆತನ ಪಾಲಿಗದು ಮಹತ್ಸಾಧನೆ. ಹೀಗೆ ನೂರಾರು ವರ್ಷಗಳ ಇತಿಹಾಸವಿರುವ ಏಕದಿನ ಕ್ರಿಕೆಟ್‌ ನಲ್ಲಿ ಬೆರಳೆಣಿಕೆ ಆಟಗಾರಷ್ಟೇ ಈವರೆಗೆ ಡಬಲ್‌ ಸೆಂಚುರಿ ಸಿಡಿಸಿ ಅಬ್ಬರಿಸಲು ಸಾಧ್ಯವಾಗಿದೆ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, ಸೆಹ್ವಾಗ್‌, ರೋಹಿತ್‌ ಶರ್ಮಾ, ಮಾರ್ಟಿನ್‌ ಗಪ್ಟಿಲ್‌, ಕ್ರಿಸ್‌ ಗೇಲ್‌ ಅಂತಹ ಅಪ್ರತಿಮ ಸಾಧಕರು.
ಆದರೆ ಏಕದಿನ ಕ್ರಿಕೆಟ್‌ ನಲ್ಲಿ ಈ ವರೆಗೆ ತ್ರಿಶತಕ ದಾಖಲಾಗಿಲ್ಲ. ರೋಹಿತ್‌ ಶರ್ಮಾ ಶ್ರೀಲಂಕಾ ವಿರುದ್ಧ ಕಲೆಹಾಕಿದ  264 ರನ್‌ ಈ ವರೆಗಿನ ಗರಿಷ್ಠ ವೈಯುಕ್ತಿಕ ರನ್ ದಾಖಲೆಯಾಗಿದೆ. ಇದೀಗ ಆಸ್ಟ್ರೇಲಿಯಾ ಯುವ ಆಟಗಾರನೊಬ್ಬ ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರಿಸಿ ತ್ರಿಶತಕ ಸಿಡಿಸುವ ಮೂಲಕ ಇಡೀ ಕ್ರಿಕೆಟ್‌ ಜಗತ್ತು ಬೆಕ್ಕಸ ಬೆರಗಾಗುವಂತೆ ಮಾಡಿದ್ದಾನೆ.

ಆಸ್ಟ್ರೇಲಿಯಾದ ಅಂಧರ ಕ್ರಿಕೆಟ್‌ನ ಆರಂಭಿಕ ಬ್ಯಾಟ್ಸ್‌ಮನ್ ಸ್ಟೆಫನ್ ನೀರೋ ಬ್ರಿಸ್ಬೇನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 140 ಎಸೆತಗಳಲ್ಲಿ 309 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ ನೀರೋ 49 ಫೋರ್‌ ಹಾಗೂ 1 ಸಿಕ್ಸರ್‌ ಗಳೊಂದಿಗೆ ದಾಖಲೆ ಮಾಡಿದ್ದಾರೆ.
ನೀರೋ ವಿಸ್ಫೋಟಕ ಆಟದ ಬಲದಿಂದ ಆಸ್ಟ್ರೇಲಿಯಾ ತಂಡವು ನಿಗದಿತ 40 ಓವರ್‌ ಗಳಲ್ಲಿ 541 ರನ್‌ ಕಲೆಹಾಕಿತು. ಇದು ಅಂಧರ ಕ್ರಿಕೆಟ್‌ ನಲ್ಲಿ ನೂತನ ದಾಖಲೆಯಾಗಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 269 ರನ್‌ ಗಳಿಂದ ಗೆದ್ದು ಬೀಗಿದೆ. ನೀರೋ ತ್ರಿಶತಕ ಸಿಡಿಸುವ ಮೂಲಕ 1998 ರ ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮಸೂದ್ ಜಾನ್ ನಿರ್ಮಿಸಿದ 262 ಔಟಾಗದೆ ವಿಶ್ವದಾಖಲೆಯನ್ನು ಮುರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!