spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿದ್ಧಾರ್ಥ್ ಆತ್ಮದ ಜೊತೆ ಮಾತನಾಡಿದ ಸ್ಟೀವ್ ಹಫ್: ಮುಂದೇನಾಯ್ತು?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನಟ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇದೀಗ ಸಿದ್ಧಾರ್ಥ್ ಆತ್ಮ ಮಾತನಾಡುತ್ತಿದೆ ಎಂದು ಪ್ಯಾರಾ ನಾರ್ಮಲ್ ತಜ್ಞ ಸ್ಟೀವ್ ಹಫ್ ಹೇಳಿದ್ದಾರೆ.
ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗಲೂ ಸ್ಟೀವ್ ಹಫ್ ಸುಶಾಂತ್ ಆತ್ಮದ ಜೊತೆ ಮಾತನಾಡಿದ್ದೇನೆ ಎನ್ನುವ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದರು. ಇದೀಗ ಸಿದ್ಧಾರ್ಥ್ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದು, ಸಿದ್ಧಾರ್ಥ್ ಮಾತುಗಳಿರುವ ವಿಡಿಯೋ ಒಂದನ್ನು ಸ್ಟೀವ್ ರಿಲೀಸ್ ಮಾಡಿದ್ದಾರೆ.
ದೇಹ ಬಿಡುವಾಗ ನೀವು ಏನನ್ನು ನೋಡಿದ್ರಿ ಎಂದು ಸ್ಟೀವ್ ಕೇಳಿದ್ದು, ಆತ್ಮ ನಾನು ಗಂಧರ್ವನನ್ನು ನೋಡಿದೆ ಎಂದಿದೆ. ತದನಂತರ ಸಾಯುವಾಗ ಏನಾಯಿತು ಎಂದು ಸ್ಟೀವ್ ಕೇಳಿದ್ದು, ನನಗೆ ಆಗ ತುಂಬಾ ನೋವಾಯಿತು, ನಾನು ನಗ್ನವಾಗಿದ್ದೆ. ಇದೀಗ ಸ್ವರ್ಗದಲ್ಲಿ ನನಗೆ ಜಾಗ ಸಿಕ್ಕಿದೆ. ದೇವರ ಜೊತೆ ಇದ್ದೇನೆ ಎಂದು ಆತ್ಮದ ಧ್ವನಿ ಹೇಳಿದೆ.
ಕೆಲವರು ಇದೆಲ್ಲಾ ನಿಜ ಎಂದು ನಂಬಿದ್ದಾರೆ. ಹಲವರು ಇದೆಲ್ಲಾ ಹುಚ್ಚಾಟ ಎಂದು ಸುಮ್ಮನಾಗಿದ್ದಾರೆ. ಇಷ್ಟಾದರೂ ಸ್ಟೀವ್ ಹಫ್ ಯೂಟ್ಯೂಬ್ ಚಾನೆಲ್‌ಗೆ 19 ಲಕ್ಷ ಸಬ್ಸ್‌ಕ್ರೈಬರ‍್ಸ್ ಇದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss