ಶೇರು ಮಾರುಕಟ್ಟೆಯ ಜಿಗಿತ : 300 ಪಾಯಿಂಟ್‌ ಏರಿದ ಸೆನ್ಸೆಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಣದುಬ್ಬರವನ್ನು ಕಡಿಮೆ ಮಾಡಲು ಅಮೆರಿಕದ ಫೆಡರಲ್‌ ಬ್ಯಾಂಕ್‌ ಬಡ್ಡಿದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಶೇರು ಮಾರುಕಟ್ಟೆಯ ಪ್ರಮುಖ ಶೇರುಗಳು ಜಿಗಿತ ಕಂಡಿವೆ.

ಆರಂಭಿಕ ಲಾಭ ಗಳಿಸಿದ ಎನ್‌ಎಸ್‌ಇ ನಿಫ್ಟಿ-50 ಸೂಚ್ಯಂಕವು 74.90 ಪಾಯಿಂಟ್‌ (0.48%) ಏರಿಕೆಯಾಗಿದ್ದು 15,814.5 ಕ್ಕೆ ತಲುಪಿದೆ ಹಾಗೂ ಬಿಎಸ್‌ಇ ಸೂಚ್ಯಂಕವು 303.24 ಪಾಯಿಂಟ್‌ (0.58%) ಏರಿಕೆಯಾಗಿ 52,996.9 ಕ್ಕೆ ಏರಿದೆ.

ಬುಧವಾರ ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ 1994ರ ನಂತರದ ಅತಿ ದೊಡ್ಡ ಬಡ್ಡಿದರ ಏರಿಕೆಗೆ ಅನುಮೋದನೆ ನೀಡಿದ್ದು ಮುಂದಿನ ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗದಲ್ಲಿ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.

ಫೆಡರಲ್‌ ಬ್ಯಾಂಕ್‌ ನ ದರ ಹೆಚ್ಚಳದಿಂದ ಹಣಕಾಸು ಮತ್ತು ಬ್ಯಾಂಕಿಂಗ್‌ ಶೇರುಗಳು ಲಾಭಗಳಿಸಿವೆ. ಎನ್‌ಎಸ್‌ಇ ಬ್ಯಾಂಕ್ ಸೂಚ್ಯಂಕವು ಶೇಕಡಾ 1 ರಷ್ಟು ಹೆಚ್ಚಾಗಿದೆ. ನಿಫ್ಟಿ- 50 ಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅತಿಹೆಚ್ಚು ಲಾಭಗಳಿಸಿದ್ದು ಶೇಕಡಾ 2.2 ರಷ್ಟು ಏರಿಕೆಯಾಗಿದೆ. ಇನ್ನು ಸ್ಪೈಸ್‌ ಜೆಟ್‌ ಸಿಇಒ ವಿಮಾನದರ ಏರಿಕೆಯ ಕುರಿತು ಹೇಳಿಕೆ ನೀಡದ್ದರಿಂದ ಸ್ಪೈಸ್‌ ಜೆಟ್‌ ಶೇರುಗಳು 2.5 ಶೇಕಡಾದಷ್ಟು ಕುಸಿತ ಕಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!