ಹಸಿರು ಬಣ್ಣದಲ್ಲಿ ತೆರೆದ ಷೇರುಪೇಟೆ: 175 ಪಾಯಿಂಟ್‌ ಏರಿದ ಸೆನ್ಸೆಕ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶೀಯ ಇಕ್ವಿಟಿ ಸೂಚ್ಯಂಕಗಳಾದ ಎನ್‌ಎಸ್‌ಇ ನಿಫ್ಟಿ ಮತ್ತು ಬಿಎಸ್‌ಇ ಸೆನ್ಸೆಕ್ಸ್ ಮಂಗಳವಾರ ಹಸಿರು ಬಣ್ಣದಲ್ಲಿ ತೆರೆದಿವೆ. ಬಿಎಸ್‌ಇ ಸೆನ್ಸೆಕ್ಸ್ 176 ಪಾಯಿಂಟ್‌ ಏರಿಕೆಯಾಗಿ 60,022.54 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 50ಯು 50 ಅಂಕಗಳ ಏರಿಕೆಯೊಂದಿಗೆ 17,650 ಮಟ್ಟಕ್ಕಿಂತ ಮೇಲೆ ವಹಿವಾಟು ನಡೆಸುತ್ತಿದೆ. ಬ್ಯಾಂಕಿಂಗ್ ಸ್ಟಾಕ್ ಸೂಚ್ಯಂಕ, ಬ್ಯಾಂಕ್ ನಿಫ್ಟಿ 0.66 ಶೇ. ಗಳಿಸಿ 41,106 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕದಲ್ಲಿ ಕೊಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಲೈಫ್, ಅದಾನಿ ಎಂಟರ್‌ಪ್ರೈಸಸ್ ಮತ್ತು ಸನ್ ಫಾರ್ಮಾ ಟಾಪ್ ಗೇನರ್ ಆಗಿವೆ. ಗ್ರಾಸಿಮ್, ಟಿಸಿಎಸ್, ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಸೂಚ್ಯಂಕದಲ್ಲಿ ಟಾಪ್ ಲೂಸರ್ ಎನಿಸಿಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!