ಮೋದಿರಾಜ್ಯದಲ್ಲಿ ಮನೆಗೆ ಮರಳಿದ ದೇವರು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನಾನಾ ದೇಶಗಳಿಗೆ ಕಳ್ಳತನದಿಂದ ಹರಿದುಹೋಗಿರುವ ಭಾರತದ ಸಂಪತ್ತುಗಳನ್ನು ಹಿಂದಕ್ಕೆ ತರುವ ಕಾರ್ಯ ಇತ್ತೀಚಿನ ವರ್ಷಗಳಲ್ಲಿ ತೀವ್ರತೆಯಿಂದ ಆಗುತ್ತಿದೆ. ಈ ಪೈಕಿ ಪ್ರಾಚೀನ ಸ್ಮರಣಿಕೆಗಳು ಹಲವಾದರೆ, ವಿಶೇಷವಾಗಿ ಭಾರತದ ದೇವತಾಮೂರ್ತಿಗಳು ಬಹಳ ಮುಖ್ಯವಾಗಿವೆ.

ಭಾನುವಾರ ಆಸ್ಟ್ರೇಲಿಯ ಪ್ರಧಾನಿ ಜತೆಗೆ ಪ್ರಧಾನಿ ನರೇಂದ್ರಮೋದಿಯವರ ಅಂತರ್ಜಾಲ ಸಮಾಲೋಚನೆ ಆಗುವ ಹೊತ್ತಿಗೆ ಆ ದೇಶಕ್ಕೆ ಕಳ್ಳತನವಾಗಿಹೋಗಿದ್ದ ಅನೇಕ ಪ್ರಾಚೀನ ಮೂರ್ತಿಗಳು ನಮ್ಮ ದೇಶಕ್ಕೆ ಹಿಂತಿರುಗಿದ್ದವು. ಅವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದಾರೆ.

ಒಟ್ಟೂ 29 ಪ್ರಾಚೀನ ಕೃತಿಗಳು ಭಾರತಕ್ಕೆ ಹಿಂತಿರುಗಿದ್ದು ಅವುಗಳಲ್ಲಿ ಹೆಚ್ಚಿನವು ದೇವರ ವಿಗ್ರಹಗಳೇ ಆಗಿವೆ. ಒಟ್ಟೂ ಆರು ಬಗೆಗಳಲ್ಲಿ ಈ ಪುನಃ ಪಡೆದ ಕಲಾಕೃತಿಗಳನ್ನು ವರ್ಗೀಕರಿಸಬಹುದಾಗಿದೆ. ಶಿವ ಮತ್ತವನ ಅನುಯಾಯಿಗಳು, ಶಕ್ತಿ ಆರಾಧನೆ, ವಿಷ್ಣು ಮತ್ತವನ ರೂಪಗಳು, ಜೈನ ಪದ್ಧತಿ, ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಎಂಬ ಪ್ರಕಾರಗಳಲ್ಲಿ ಇವನ್ನು ಕಾಣಬಹುದು.

ಬೇರೆ ಬೇರೆ ಕಾಲಘಟ್ಟಕ್ಕೆ ಸೇರಿದ ಕೃತಿ ಅಥವಾ ವಸ್ತುಗಳು ಇವಾಗಿದ್ದು ಕೆಲವು 9-10ನೇ ಶತಮಾನದಷ್ಟು ಪ್ರಾಚೀನ. ಮರಳುಗಲ್ಲು, ಅಮೃತಶಿಲ್ಪ, ಕಂಚು, ಹಿತ್ತಾಳೆ, ಪೇಪರ್ ಪ್ರಕಾರದಲ್ಲಿ ಇವು ಹರಡಿಕೊಂಡಿವೆ.

ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ ಹೀಗೆ ಭಿನ್ನ ಭೌಗೋಳಿಕ ಪ್ರದೇಶಗಳಿಗೆ ಸೇರಿದ ಕೃತಿಗಳೂ ಇವಾಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!