ತಕ್ಷಣವೇ ಎಲ್ಲಾ ಟಿಕೆಟ್ ಬುಕಿಂಗ್ ನಿಲ್ಲಿಸಿ: ಗೋ ಫಸ್ಟ್ ಏರ್​ಲೈನ್ಸ್​ ಗೆ DGCA ಶೋಕಾಸ್ ನೊಟೀಸ್ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಗೋ ಫಸ್ಟ್ ಏರ್​ಲೈನ್ಸ್​ಗೆ (Go First Airlines) ಡಿಜಿಸಿಎ ಶೋಕಾಸ್ ನೀಡಿದೆ.

ವಿಮಾನ ಸೇವೆಯನ್ನು ಸುರಕ್ಷಿತವಾಗಿ ಕೈಗೊಳ್ಳಲು ವಿಫಲರಾಗಿದ್ದಕ್ಕೆ ಕಾರಣ ಕೇಳಿ ಡಿಜಿಸಿಎ ನೋಟೀಸ್ ಜಾರಿ ಮಾಡಿದೆ. ತತ್​ಕ್ಷಣದಿಂದಲೇ ನೇರವಾಗಿ ಅಥವಾ ಪರೋಕ್ಷವಾಗಿ ಆಗಲೀ ಟಿಕೆಟ್ ಬುಕಿಂಗ್ ಮತ್ತು ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದೂ ನಾಗರಿಕ ವಿಮಾನಯಾನ ಮಹಾ ನಿರ್ದೇನಾಲಯ (DGCA- Directorate General of Civil Aviation) ಸೋಮವಾರ ಆದೇಶ ಹೊರಡಿಸಿದೆ.

ಈ ಆದೇಶ ಅನಿರ್ದಿಷ್ಟಾವಧಿಯವರೆಗೂ ಜಾರಿಯಲ್ಲಿರುತ್ತದೆ. ವಿಮಾನ ಹಾರಾಟ ನಿಲ್ಲಿಸಲು ಕಾರಣ ಕೇಳಿ ನೀಡಲಾದ ಶೋಕಾಸ್ ನೋಟೀಸ್​ಗೆ ಗೋ ಫಸ್ಟ್ ಏರ್​ಲೈನ್ಸ್ ಉತ್ತರ ನೀಡಬೇಕಿದೆ. ಈ ಉತ್ತರ ಬಂದ ಬಳಿಕ ವಿಮಾನ ಸಂಸ್ಥೆಯ ಪರವಾನಿಗೆಯನ್ನು ಮುಂದುವರಿಸುವುದೋ ಅಥವಾ ಹಿಂಪಡೆಯುವುದೋ ಎಂಬುದನ್ನು ನಿರ್ಧರಿಸಲಾಗುತ್ತದೆ.

ಗೋ ಫಸ್ಟ್ ಏರ್​ಲೈನ್ಸ್ ಮೇ 3ರಂದು ತಾತ್ಕಾಲಿಕವಾಗಿ ಸೇವೆ ನಿಲ್ಲಿಸಿತು. ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಟ್ಸಿ ಕಾಯ್ದೆ ಅಡಿ ಕಾರ್ಪೊರೆಟ್ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತು. ಮೇ 4ಮತ್ತು 5ರ ಎಲ್ಲಾ ವಿಮಾನ ಹಾರಾಟ ರದ್ದು ಮಾಡಿತು. ಟಿಕೆಟ್ ಬುಕಿಂಗ್ ಕೂಡ ನಿಲ್ಲಿಸಿತು. ಬಳಿಕ ಮೇ 15ರವರೆಗೂ ವಿಮಾನ ಹಾರಾಟದ ಸ್ಥಗಿತ ಮುಂದುವರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!