ಮಾನ ಮರ್ಯಾದೆ ಇದ್ರೆ ದೇಗುಲಕ್ಕೆ ಹೋಗುವುದನ್ನು ನಿಲ್ಲಿಸಿ: ಪ್ರೊ.ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವಸ್ಥಾನ ಕಟ್ಟುವುದು ಶೂದ್ರರು ಒಳಗೆ ಇರುವವರು ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಒಳಗಡೆ ಬಿಟ್ಟುಕೊಳ್ಳುವುದಿಲ್ಲ. ಮಾನ ಮರ್ಯಾದೆ ಇದ್ದರೆ ದೇಗುಲಕ್ಕೆ ಹೋಗುವುದನ್ನು ನಿಲ್ಲಿಸಬೇಕು ಎಂದು ಮೈಸೂರಿನ ಮಹಿಷ ದಸರಾದಲ್ಲಿ ಸಾಹಿತಿ ಪ್ರೊಫೆಸರ್ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾನ, ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ನಾನು 50 ವರ್ಷ ಆಯಿತು ದೇವಸ್ಥಾನಕ್ಕೆ ಹೋಗಿ. ದೇವಸ್ಥಾಕ್ಕೆ ಹೋದರೆ ಏನು ಆಗಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದಾರೆ.

ಬುದ್ಧರನ್ನು ಹೊಗಳುವ ಭರದಲ್ಲಿ ಹಿಂದು ಧರ್ಮದ ಬಗ್ಗೆ ಹೀನವಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಜ್ಞಾನದ ಹಸಿವು ಇಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ. ಹಿಂದು ಧರ್ಮ ಅಂದರೆ ಅದು ಹಿಂದುಗಳ ಧರ್ಮ ಅಲ್ಲ. ಹಿಂದು ಧರ್ಮ ಅಂದರೆ ಅದು ಬ್ರಾಹ್ಮಣರ ಧರ್ಮ. ಹಿಂದು ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದುಗಳು ಮುಂದಕ್ಕೆ ಬಾರದ ಜನ ಹಾಗೂ ಬೇರೆಯವರನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಎನ್ನಲ್ಲಾ, ಅವರನ್ನು ಶೂದ್ರರು ಅಂತಾರೆ. ದೇವಸ್ಥಾನ ಕಟ್ಟುವುದು ಶೂದ್ರರು. ದೇವಸ್ಥಾನದ ಒಳಗೆ ಇರುವವರ ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಬಿಟ್ಟುಕೊಳ್ಳಲ್ಲ. ನಾವು ಶೂದ್ರರಲ್ಲಾ ಎಂದು ಹೇಳಬೇಕು ಎಂದಿದ್ದಾರೆ.

ತಟ್ಟೆಗೆ ದುಡ್ಡು ಹಾಕ್ತೀರಾ, ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡುತ್ತಾರೆ ಅಷ್ಟೇ. ದೇವಸ್ಥಾನಕ್ಕೆ ಹೋದರೆ ಕಳೆದುಕೊಳ್ಳುತ್ತೇವೆ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ಮನುಸ್ಮೃತಿಯಲ್ಲಿ ಶೂದ್ರ ಅಂದರೆ ಸೂಳೆಗೆ ಹುಟ್ಟಿದವನು ಅಂತಾ ಇದೆ. ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.

ಹಿಂದು ಧರ್ಮ ನಮ್ಮದಲ್ಲ. ನಮಗೆ ಹಿಂದು ಧರ್ಮ ಬೇಕಿಲ್ಲ. ಎಲ್ಲರೂ ಬುದ್ಧ ಗುರುಗಳನ್ನು ನಂಬಿ. ನಾನು ಹೇಳಿದ್ದು ನಂಬಿ ಅಂತಾ ಬುದ್ಧ ಹೇಳಲ್ಲ. ನಾನು‌ ಹೇಳಿದ್ದು ಕೇಳಬೇಕು ಇಲ್ಲದಿದ್ದರೆ ಸ್ವರ್ಗ ಸಿಗಲ್ಲ ಅಂತ ಏಸು ಹೇಳುತ್ತಾರೆ. ನನ್ನ ಮಾತು ಕೇಳದಿದ್ದರೆ ಮೋಕ್ಷ ಸಿಗಲ್ಲ ಅಂತ ಪ್ರವಾದಿ ಹೇಳುತ್ತಾನೆ. ನಾನು ಹೇಳಿದ್ದು‌ ಕೇಳದಿದ್ದರೆ ನರಕ್ಕೆ ಹೋಗ್ತೀರಾ ಅಂತಾ ಕೃಷ್ಣ ಹೇಳುತ್ತಾನೆ. ಗುಲಾಮ, ಸೂಳೆಮಗ ಎಂದು ಹೇಳುವ ಹಿಂದು ಧರ್ಮದಲ್ಲಿ ಇರಬಾರದು. ನಾವು ಬುದ್ಧ ಧರ್ಮಕ್ಕೆ ಹೋಗಬೇಕು. ಹಿಂದು ಧರ್ಮಕ್ಕೆ ಎಡಗಾಲು ಎಕ್ಕಡ ತಗೊಂಡು ಹೊಡೆಯಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನಾಗಿದ್ದಾನೆ ಅವನು ಹಿಂದು. ಹಿಂದು ಎಂದರೆ ಹೀನಾ ಎಂದು ಅರ್ಥ. ಯಾರು ಹಿಂದು ಆಗಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

7 COMMENTS

  1. ಜೀವನ ಇಷ್ಟೇ ದುಡ್ಡು ಬಂದ ಮೇಲೆ. ಮತ್ತು ನೀನು ಹುಟ್ಟಿದಾಗ ಮತ್ತು ಸಾಯುವಾಗ ಕೂಡ ದೇವರು ನೆನಪು ಮಾಡ್ಕೊತೀಯ ಬೋಳಿಮಗನೇ ಯಾವ ಧರ್ಮ ಆಗಲಿ ಅವರ ದೇವರು ಅವರಿಗೆ ಇಷ್ಟ ಅದನ್ನ ಮೀರಿ ಎಲ್ಲ ಧರ್ಮ ಒಂದೇ. ಜನರ ಭಾವನೆ ಬೇರೆ ಅಷ್ಟೇ ಕಂತ್ರಿ ನಾಯಿ ಹುಟ್ಟಿದಾ ಗುಲ್ಡು

  2. ಇವನು ಮಾನ ಮರ್ಯಾದೆ ಎಲ್ಲಾ ಬಿಟ್ಟವನು ಅದಕ್ಕೆ ಇಂತಹ ಹೇಳಿಕೆ ಕೊಡುತ್ತಿದ್ದಾನೆ

  3. HALF KNOWLEDGE about a culture has created such intellectuals. We need not give any importance to such low human beings. At the same time we need to introspect. By our practices we are constantly degrading our own God’s, religion and culture. We cannot dance in the streets keeping a resin made idol on a tractor with blaring sexy music and call it celebration. Disgusting practices like these have spoiled our culture.

  4. ಅನಂತ್ ಮೂರ್ತಿ ಕೂಡ ಹೀಗೆ ಹೇಳುತ್ತಿದ್ದ ಕೊನೆಗೆ ವೈದಿಕ ಪರಂಪರೆಯ ಮೂಲಕ ನನ್ನ ಅಂತ ಸಂಸ್ಕಾರ ಮಾಡಿ ಎಂದು ವಿಲ್ ಬರೆದಿದ್ದ ಹಾಗೆ ಇವನು

  5. ಇವನ ಮೇಲೆ ಎಲ್ಲಾ ಹಿಂದೂ ಭಾಂದವರು ಸೇರಿ ಮೊಕದ್ದಮೆ ದಾಖಲು ಮಾಡಬೇಕು. ಸಮಾಜದಲ್ಲಿ ಧರ್ಮ ಸಂಘರ್ಷದಿಂದ ಹೊತ್ತಿ ಉರಿಯುತ್ತಿದ್ದಾಗ ಇವನೊಬ್ಬ ಇಡೀ ಸಮಾಜಕ್ಕೆ ಕೆಟ್ಟ ಮನಸ್ಥಿತಿಯನ್ನು ರವಾನಿಸುತ್ತಿದ್ದಾನೆ.‌ಕೊಲೆಗಿಂತ ಹೆಚ್ಚು ಈ ತರಹ ಹೇಳಿಕೆ ನೀಡೋದು…

LEAVE A REPLY

Please enter your comment!
Please enter your name here

error: Content is protected !!