ಒಂದು ಗಂಟೆಗಳ ಕಾಲ ರೈಲು ನಿಲ್ಲಿಸಿ ಮಾಯವಾದ ಲೋಕೋ ಪೈಲಟ್: ಹುಡುಕಿ ಹುಡುಕಿ ಕೊನೆಗೂ ಆತ ಸಿಕ್ಕಿದ್ದು ಎಲ್ಲಿ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರದಲ್ಲೊಂದು ವಿಲಕ್ಷಣ ಘಟನೆ ನಡೆದಿದ್ದು, ಅದೇನೆಂದರೆ ರೈಲು ಹೊರಡುವ ಸಮಯಕ್ಕೆ ಸರಿಯಾಗಿ ರೈಲು ಚಲಾಯಿಸುವ ಲೋಕೋ ಪೈಲಟ್ ಸುಮಾರು ಒಂದು ಗಂಟೆ ಕಾಲ ನಾಪತ್ತೆಯಾಗಿದ್ದರು.
ಹೌದು, ಸಾಮಾನ್ಯವಾಗಿ ರೈಲುಗಳ ತಲುಪುವುದು ಗಂಟೆಗಟ್ಟಲೆ ತಡವಾಗುತ್ತದೆ ಎಂಬ ಮಾತಿದೆ. ಅದೇ ರೀತಿ ಬಿಹಾರದಲ್ಲೂ ಸೋಮವಾರ ರೈಲು ತಡವಾಗಿ ಹೊರಟಿದೆ. ಇದಕ್ಕೆ
ಕಾರಣ ಏನು ಎಂದು ಹುಡುಕಿದರೆ ರೋಚಕ ಸಂಗತಿ ಬಹಿರಂಗವಾಗಿದೆ.
ಏನೆಂದರೆ, ಲೋಕೋಪೈಲಟ್ ರೈಲನ್ನು ನಿಲ್ಲಿಸಿ `ಗುಂಡು’ ಹಾಕಲು ಹೋಗಿದ್ದನಂತೆ. ಅಂತೂ ಇಂತೂ ರೈಲ್ವೆ ಪೊಲೀಸರು ಹುಡುಕಿ ಹುಡುಕಿ ಸಾಕಾಗಿದ್ದಾರೆ. ಒಂದು ಗಂಟೆ ತರುವಾಯ ಲೋಕೋಪೈಲಟ್ ತೂರಾಡುತ್ತಾ ರೈಲನ್ನು ತಲುಪಿದ್ದಾನೆ ಎಂದು ವರದಿಯಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಮಸ್ತಿಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಲೋಕ್ ಅಗರ್ವಾಲ್, ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜಧಾನಿ ಎಕ್ಸ್ ಪ್ರೆಸ್ ರೈಲಿಗೆ ಮಾರ್ಗ ಬಿಟ್ಟು ಕೊಡಬೇಕಾಗಿದ್ದ ಹಿನ್ನೆಲೆಯಲ್ಲಿ ಹಸನ್ಪುರ ತಲುಪಲು ಸುಮಾರು 45 ಕಿಲೋಮೀಟರ್ ದೂರದಲ್ಲಿ ರೈಲನ್ನು ನಿಲ್ಲಿಸಲಾಯಿತು. ಸಾಮಾನ್ಯವಾಗಿ ಈ ಜಾಗದಲ್ಲಿ ಗರಿಷ್ಠವೆಂದರೆ 2 ನಿಮಿಷ ನಿಲುಗಡೆ ಇತ್ತು.ಆದರೆ, ರೈಲನ್ನು ನಿಲ್ಲಿಸಿದ್ದೇ ತಡ ಲೋಕೋ ಪೈಲಟ್ ಕರ್ಮವೀರ್ ಪ್ರಸಾದ್ ಯಾದವ್, ಇಳಿದು ಹತ್ತಿರದಲ್ಲೇ ಇದ್ದ ಮದ್ಯದಂಗಡಿಗೆ ಹೋಗಿ ಮದ್ಯಸೇವನೆ ಮಾಡಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!