Thursday, August 11, 2022

Latest Posts

ಚಾರ್ಮಾಡಿ ಘಾಟಿಯಲ್ಲಿ ಭೋರ್ಗರೆಯುತ್ತಿರುವ ಜಲಪಾತಗಳು: ಅವಿಸ್ಮರಣೀಯ ಅನುಭವವನ್ನು ಸವಿದ ಪ್ರವಾಸಿಗರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ವರದಿ, ಚಿಕ್ಕಮಗಳೂರು:

ಚಾರ್ಮಾಡಿ ಘಾಟಿಯ ಗಗನಚುಂಬಿ ಬೆಟ್ಟಗಳಿಂದ ಹಾಲ್ನೊರೆಯುಕ್ಕಿಸುತ್ತಾ ರಸ್ತೆಗೆ ಧುಮ್ಮಿಕ್ಕುತ್ತಿರುವ ಜಲಪಾತಗಳು ಪ್ರವಾಸಿಗರಿಗೆ ಅವಿಸ್ಮರಣೀಯ ಅನುಭವವನ್ನು ನೀಡುತ್ತಿವೆ.
ಭಾನುವಾರ ಮಳೆಯ ನಡುವೆ ಬೆಟ್ಟಗಳಿಂದ ಭೋರ್ಗರೆಯುತ್ತ ಹರಿಯುತ್ತಿದ್ದ ಜಲಪಾತಗಳು ರಸ್ತೆಯುದ್ದಕ್ಕೂ ಪ್ರವಾಸಿಗರನ್ನು ಹಿಡಿದಿಟ್ಟಿತ್ತು. ರಸ್ತೆ ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುವವರು ಹಲವರಾದರೆ, ಮೈಕೊರೆಯುವ ಚಳಿಯಲ್ಲೂ ಜಲಪಾತದ ನೀರಿನಲ್ಲಿ ಮಿಂದು ಸಂತಸ ಅನುಭವಿಸುವವರೂ ಕಡಿಮೆ ಇರಲಿಲ್ಲ.
ರಸ್ತೆ ತುಂಬ ತುಂಬಿಕೊಂಡ ಪ್ರವಾಸಿಗರಿಂದ ಇತರೆ ವಾಹನ ಚಾಲಕರು ಕಿರಿಕಿರಿಯನ್ನೂ ಅನುಭವಿಸಿದ್ದಾರೆ. ಇದೇ ಕಾರಣಕ್ಕೆ ಲಾರಿ ಚಾಲಕ ಮತ್ತು ಪ್ರವಾಸಿಗರೊಬ್ಬರ ಮಧ್ಯೆ ಚಕಮಕಿ ಉಂಟಾಗಿ ಒಡೆದಾಡಿಕೊಂಡ ಘಟನೆಯೂ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss