spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಂದೇ ಜೋಕ್‌ಗೆ ಎಷ್ಟು ಬಾರಿ ನಗೋಕೆ ಸಾಧ್ಯ ನೀವೇ ಹೇಳಿ?

- Advertisement -Nitte

ಜೀವನದಲ್ಲಿ ಎಲ್ಲದರ ಬಗ್ಗೆಯೂ ದೂರು, ಅಸಮಾಧಾನ ಇರುವ ವ್ಯಕ್ತಿಯೊಬ್ಬ ಸಂತನೊಬ್ಬನನ್ನ ಭೇಟಿಯಾದ. ʼನನ್ನ ಜೀವನದಲ್ಲಿ ಏನೂ ಇಲ್ಲ, ಸರಿಯಾಗಿ ಓದಿಸಲಿಲ್ಲ, ಸರಿಯಾದ ಕೆಲಸ ಇಲ್ಲ, ಖುಷಿಯೇ ಇಲ್ಲ, ಹೆಂಡತಿ ಕಿರಿಕಿರಿ ಮಾಡುತ್ತಾಳೆ, ಮಕ್ಕಳು ಒಳ್ಳೆ ಅಂಕ ತೆಗೆಯುತ್ತಿಲ್ಲ, ಬಾಸ್‌ ಬೈತಾರೆʼ ಹೀಗೆ ಈತನದ್ದು ಸಾಲು ಸಾಲು ದೂರು.

ಅದಕ್ಕೆ ಆ ಸ್ವಾಮೀಜಿ ಸ್ವಲ್ಪ ಸುಧಾರಿಸಿಕೊಳ್ಳಿ ಎಂದು ಹೇಳಿ ನೀರು ಕೊಟ್ಟು ಸಮಾಧಾನಿಸಿದ. ನಂತರ ʼಈ ವಾತವರಣ ಯಾಕೋ ಗಂಭೀರವಾಗಿದೆ. ನಾನೊಂದು ತಮಾಷೆಯ ವಿಷಯ ಹೇಳ್ತೇನೆʼ ಎಂದರು. ಅದಕ್ಕೆ ಈ ವ್ಯಕ್ತಿ ʼಅದನ್ನಾದರೂ ಹೇಳಿ ಸ್ವಾಮಿ ನನಗೂ ಜೀವನ ಸಾಕಾಗಿ ಹೋಗಿದೆʼ ಎಂದ.

ಸ್ವಾಮೀಜಿ ಒಂದೊಳ್ಳೆ ಜೋಕ್‌ ಹೇಳಿದರು. ಈತನಿಗೆ ಸಿಕ್ಕಾಪಟ್ಟೆ ನಗು ಬಂತು, ಒಂದು ನಿಮಿಷ ನಕ್ಕು ಸುಧಾರಿಸಿಕೊಂಡ. ನಂತರ ಸ್ವಾಮೀಜಿ ನಗುತ್ತಾ ಮತ್ತದೇ ಜೋಕನ್ನು ಹೇಳಿದರು. ಈತ ಈಗಲೂ ನಕ್ಕ. ಆದರೆ ಮೊದಲಿನಷ್ಟಲ್ಲ. ನಂತರ ಒಂದು ನಿಮಿಷ ಬಿಟ್ಟು ಮತ್ತದೇ ಜೋಕ್‌ ಹೇಳಿದರು ಸ್ವಾಮೀಜಿ. ಈ ಬಾರಿ ನಗೆಯ ಶಬ್ದವೇ ಇಲ್ಲ. ಮತ್ತೂ ಸ್ವಾಮೀಜಿ ಈತನನ್ನ ಬಿಡಲಿಲ್ಲ, ಅದೇ ಜೋಕ್‌ ಹೇಳಿದರು. ಆತನಿಗೆ ಕೋಪ ಬಂತು, ʼಒಂದು ಸಲ ನಗಬಹುದು, ಎರಡು ಸಲ ನಗಬಹುದು ಒಂದೇ ಜೋಕ್‌ಗೆ ಎಷ್ಟು ಬಾರಿ ನಗೋಕೆ ಸಾಧ್ಯ ಸ್ವಾಮೀಜಿʼ ಎಂದ.

ಆಗ ಸ್ವಾಮೀಜಿ ಹೇಳಿದರು. ʼಒಂದು ಜೋಕ್‌ಗೆ ಪದೇ ಪದೆ ನಗೋಕಾಗೋದಿಲ್ಲ. ಆದರೆ ಒಂದೇ ಸಮಸ್ಯೆಗೆ ಪದೇ ಪದೆ ದೂರೋದ್ಯಾಕೆ? ಅಳೋದ್ಯಾಕೆ?ʼ

ಸಮಸ್ಯೆ ಎಲ್ಲರಿಗೂ ಇದ್ದದ್ದೆ. ದೂರಿದರೆ ಬದಲಾವಣೆ ಕಾಣಬೇಕು, ಅಥವಾ ಬದಲಾವಣೆ ನಿಮ್ಮಿಂದಲೇ ಆರಂಭವಾಗಬೇಕು. ಅದನ್ನು ಬಿಟ್ಟು ದೂಷಿಸುವುದರಲ್ಲೇ ದಿನ ಕಳೆದರೆ ನೀವು ಬದುಕನ್ನು ಸಂಭ್ರಮಿಸೋದು ಯಾವಾಗ? ಜೀವಿಸೋದು ಯಾವಾಗ? 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss