ದಾರಿಯಲ್ಲಿ ಬೆಕ್ಕೊಂದು ಪೈಪ್ನ ಒಳಗೆ ಸಿಕ್ಕು ಒದ್ದಾಡ್ತಾ ಇತ್ತು. ಊಟ ಇಲ್ಲದೆ, ನೀರಿಲ್ಲದೆ ಸುಸ್ತಾಗಿ ಹೋಗಿತ್ತು. ಹೀಗೆ ಒಂದು ದಿನದಿಂದ ಬೆಕ್ಕು ಅಲ್ಲಿಯೇ ಇತ್ತು.
ಜನ ಎಲ್ಲರೂ ಆ ಬೆಕ್ಕನ್ನು ನೋಡಿ ಮುಂದೆ ಹೋಗುತ್ತಿದ್ದರು. ಯಾರೊಬ್ಬರೂ ಅದರ ಸಹಾಯ ಮಾಡಲಿಲ್ಲ.
ಹೀಗೆ ಒಬ್ಬ ವ್ಯಕ್ತಿ ಬೆಕ್ಕನ್ನು ಪೈಪ್ನಿಂದ ಹೊರತೆಗೆಯೋದಕ್ಕೆ ಪ್ರಯತ್ನ ಮಾಡಿದ. ಹೆದರಿದ ಬೆಕ್ಕು ಆತನ ಕೈಗೆ ರಕ್ತ ಬರೋ ರೀತಿ ಪರಚಿಬಿಡ್ತು.
ಆತ ಕೈ ತೆಗೆದುಬಿಟ್ಟು ಎದ್ದು ಹೋದ. ಇದಾದ ಅರ್ಧಗಂಟೆಗೆ ಮತ್ತೆ ಅದೇ ವ್ಯಕ್ತಿ ಬಂದು ಬೆಕ್ಕನ್ನು ತೆಗೆಯೋದಕ್ಕೆ ಪ್ರಯತ್ನಿಸಿದ. ಈಗಲೂ ಬೆಕ್ಕು ಜೋರಾಗಿ ಪರಚಿತು. ಆದರೂ ಆತ ಪ್ರಯತ್ನ ಬಿಡದೇ ಹೇಗಾದ್ರೂ ಮಾಡಿ ಬೆಕ್ಕನ್ನು ಹೊರತರೋಣ ಅಂತ ಯೋಚಿಸ್ತಿದ್ದ. ಈತ ಬೆಕ್ಕಿಗೆ ಸಹಾಯ ಮಾಡೋಕೆ ಹೋಗಿ ಕೈಗೆ ಗಾಯ ಮಾಡಿಕೊಂಡದ್ದನ್ನು ವ್ಯಕ್ತಿಯೊಬ್ಬ ನೋಡ್ತಾ ನಿಂತಿದ್ದ. ಅವನು ಬಳಿ ಬಂದು, ಬೆಕ್ಕು ಕೈ ರಕ್ತ ಬರೋ ರೀತಿ ಕಚ್ಚಿದ್ರೂ ಯಾಕೆ ನೀರು ಅದಕ್ಕೆ ಸಹಾಯ ಮಾಡ್ತಿದ್ದೀರ ಅಂತ ಕೇಳಿದ.
ಅದಕ್ಕೆ ಆ ವ್ಯಕ್ತಿ ಹೇಳಿದ. ಅದು ಪ್ರಾಣಿ, ಪರಚೋದು ಅದರ ಸಹಜ ಗುಣ, ನಾನು ಮನುಷ್ಯ ಸಹಾಯ ಮಾಡೋದು ನನ್ನ ಮನುಷ್ಯತ್ವ!
ಹೌದು, ನೀವು ಮನುಷ್ಯ ಗುಣಗಳನ್ನು ಫಾಲೋ ಮಾಡಿದರೆ ಸಾಕು, ಇನ್ನೊಬ್ಬರಿಂದ ಯಾವ ನಿರೀಕ್ಷೆ ಇಲ್ಲದೆ ಜೀವನ ಮಾಡಬೇಕು.