Tuesday, June 28, 2022

Latest Posts

ನಿನ್ನನ್ನು ಬದುಕಿಸಲು ಬಂದ ಅಂಬಿಗ ನಾನೇ ಎಂದು ದೇವರೇ ಹೇಳಿದಾಗ..

ಒಬ್ಬ ವ್ಯಕ್ತಿಯಿದ್ದ. ಆತನಿಗೆ ದೇವರ ಮೇಲೆ ಎಲ್ಲಿಲ್ಲದ ನಂಬಿಕೆ. ಎಂಥದ್ದೇ ಸಂದರ್ಭ ಬರಲಿ ದೇವರು ನನ್ನನ್ನು ಕಾಪಾಡುತ್ತಾನೆ ಎನ್ನುವ ವಿಶ್ವಾಸ ಅವನಲ್ಲಿತ್ತು.
ಅಂತೆಯೇ ಅದೊಂದು ದಿನ ಆತ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ. ಇದ್ದಕ್ಕಿದ್ದಂತೆಯೇ ಮಳೆ ಬಂದು, ಅಲೆಗಳು ಹೆಚ್ಚಾಗಿ ದೋಣಿ ಮುಳುಗುವ ಆತಂಕ ಹೆಚ್ಚಾಯ್ತು.
ಅಂಬಿಗ ಹೇಳಿದ ದಡ ತುಂಬಾ ದೂರವಿಲ್ಲ, ಈಜಲು ಬರುವವರೆಲ್ಲ ನೀರಿಗೆ ಹಾರಿ ಈಜಿ ದಡಸೇರಿ. ದೋಣಿಯಲ್ಲಿದ್ದ ಅರ್ಧ ಮಂದಿ ಹಾರಿ ಪ್ರಾಣ ಉಳಿಸಿಕೊಂಡರು.
ಈಜು ಬಾರದೇ ಭಯದಲ್ಲಿದ್ದವರನ್ನು ಅಂಬಿಗ ಹೇಗೋ ಸಂಭಾಳಿಸಿ ದಡ ಸೇರಿಸಲು ಯತ್ನಿಸುತ್ತಿದ್ದ. ಇದೇ ವೇಳೆ ಕೈ ಕೊಡಿ ಸ್ವಾಮಿ ನಿಮ್ಮನ್ನೂ ದಡ ಸೇರಿಸುತ್ತೇನೆ ಎಂದು ಅಂಬಿಗ ಹೇಳಿದ. ನಾನು ಕೆಳಜಾತಿಯವರನ್ನು ಮುಟ್ಟೋದಿಲ್ಲ ಎಂದು ಆ ವ್ಯಕ್ತಿ ಹೇಳಿದ. ಅಂಬಿಗನೂ ಜಾಸ್ತಿ ತಲೆ ಕೆಡಿಸಿಕೊಳ್ಳದೇ ತನ್ನನ್ನೇ ನಂಬಿದ ಜನರನ್ನು ಉಳಿಸಿದ.
ನಂತರ ದೋಣಿಯಲ್ಲಿ ಉಳಿದಿದ್ದು ಈ ವ್ಯಕ್ತಿ ಮಾತ್ರ. ದೋಣಿಯಲ್ಲಿ ಮುಕ್ಕಾಲು ನೀರು ತುಂಬಿದಾಗಲೂ ಈ ವ್ಯಕ್ತಿ ಶಾಂತವಾಗಿದ್ದ. ನನ್ನನ್ನು ದೇವರು ಕಾಪಾಡ್ತಾನೆ, ನನಗೆ ಯಾರ ಅವಶ್ಯಕತೆಯೂ ಇಲ್ಲ ಎಂದು ಗೊಣಗುತ್ತಿದ್ದ.
ಈಜು ಬರುತ್ತಿದ್ದ ವ್ಯಕ್ತಿಯೊಬ್ಬ ಈಜಿ ವಾಪಾಸ್ ಬಂದ. ಸ್ವಾಮಿ ನನ್ನ ಹೆಗಲ ಮೇಲೆ ಹತ್ತಿ ನಾನ್ ಸಹಾಯ ಮಾಡ್ತೀನಿ ಎಂದ.
ಇದಕ್ಕೂ ಈ ವ್ಯಕ್ತಿ ನೀನು ಯಾವ ಜಾತಿ ಎಂದು ಕೇಳಿದ, ಈಜಿ ಬಂದ ವ್ಯಕ್ತಿಗೆ ಸಿಟ್ಟು ಬಂದು ವಾಪಾಸಾದ. ಕಡೆಯ ಕ್ಷಣದವರೆಗೂ ನನ್ನನ್ನು ದೇವರು ಕಾಪಾಡ್ತಾನೆ ಎನ್ನೋ ನಂಬಿಕೆಯಲ್ಲೇ ಈ ವ್ಯಕ್ತಿ ದೋಣಿಯಲ್ಲೇ ಕುಳಿತ.
ಸ್ವಲ್ಪ ಸಮಯದಲ್ಲಿ ಮುಳುಗಿ ಹೋದ!
ಸಾಯುವ ಕಡೇ ಕ್ಷಣದಲ್ಲಿ ಇವನಿಗೆ ದೇವರು ಕಂಡಂತಾಯ್ತು. ದೇವರೆ ಯಾಕೆ ನನ್ನನ್ನು ಮುಳುಗಿಸಿದೆ. ನನ್ನ ಇಡೀ ಜೀವನ ನಿನ್ನೇ ನಂಬಿದ್ದೆ. ಹೀಗ್ಯಾಕೆ ಮಾಡಿದೆ ಎಂದು ಕಣ್ಣೀರಿಟ್ಟ.
ಅದಕ್ಕೆ ದೇವರು ಹೇಳಿದ ನಾನು ನಿನ್ನನ್ನು ಬದುಕಿಸಲು ಹಲವು ರೂಪದಲ್ಲಿ ಬಂದೆ, ನೀನೇ ನನ್ನ ಸಾಥ್ ನೀಡಲಿಲ್ಲ, ಆ ಅಂಬಿಗನೂ ನಾನೇ, ಈಜಿ ವಾಪಾಸದ ವ್ಯಕ್ತಿಯೂ ನಾನೆ!

ದೇವರು ಹಲವು ರೂಪದಲ್ಲಿ ಹಲವು ಅವಕಾಶಗಳನ್ನು ನಮಗೆ ನೀಡಿರುತ್ತಾನೆ. ಅದನ್ನು ಕಡೆಗಣಿಸಿ, ಇದೇ ಬೇಕು ಎಂದು ನಾವು ಕೂರುತ್ತೇವೆ. ಈ ಪುಟ್ಟ ಕಥೆಯಲ್ಲಿ ಎಷ್ಟೆಲ್ಲಾ ಅರ್ಥ ಇದೆ ಅಲ್ಲವಾ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss