Tuesday, August 16, 2022

Latest Posts

ನಿಮ್ಮ ನೆಮ್ಮದಿ ಕೆಡಿಸುವ ಪುಟ್ಟ ಹಕ್ಕಿಗಳು ಬೆನ್ನ ಮೇಲೆಯೇ ಕುಳಿತಿವೆ…

ಸಿಂಹ ಯಾವುದಕ್ಕೂ ಹೆದರೋದಿಲ್ಲ. ಎಲ್ಲ ಪ್ರಾಣಿಗಳಿಗೂ ಸಿಂಹವನ್ನು ಕಂಡರೆ ಭಯ. ಅತಿಯಾದ ಶಕ್ತಿ, ಸಿಟ್ಟು, ವೇಗ ಎಲ್ಲವೂ ಇದಕ್ಕಿದೆ. ಅದಕ್ಕೇ ಅಲ್ವಾ ಇದನ್ನು ಕಾಡಿನ ರಾಜ ಎನ್ನೋದು?
ಆದರೆ ಈ ಕಾಡಿನ ರಾಜನಿಗೂ ಒಂದು ಜೀವಿಯಿಂದ ಕಿರಿಕಿರಿಯಾಗುತ್ತದಂತೆ. ಹೌದು ಆ ಜೀವಿ ಪುಟ್ಟ ಹಕ್ಕಿ. ಸಿಂಹದ ಬೆನ್ನಿನ ಮೇಲೆ ಕುಳಿತು, ಕಚಗುಳಿ ಇಟ್ಟು, ಬೆನ್ನು ಕೆರೆದು ಇರಿಟೇಟ್ ಮಾಡುತ್ತಿರುತ್ತದೆ. ಆದರೆ ಇಷ್ಟೆಲ್ಲಾ ಶಕ್ತಿ ಇರುವ ಸಿಂಹಕ್ಕೆ ಏನು ಮಾಡಲೂ ಸಾಧ್ಯವಾಗದೇ ಒದ್ದಾಡಿ ಸುಮ್ಮನಾಗುತ್ತದೆ!

ಇಷ್ಟೆ, ನಮ್ಮ ಕಥೆ ಮುಗೀತು, ಈಗ ನೀವು ಆಲೋಚಿಸಿ, ಯಾರು ಸಿಂಹ, ಯಾರು ಹಕ್ಕಿ, ಏನೀ ಕಿರಿಕಿರಿ?

ನೀವು ನಿಮ್ಮ ಕೆಲಸ ಮಾಡಿಕೊಳ್ಳುವುದರಲ್ಲಿ, ಸಮಾಜದಲ್ಲಿ ಎಷ್ಟೇ ಶಕ್ತಿಶಾಲಿ, ಪ್ರಭಾವಿ ವ್ಯಕ್ತಿ ಆಗಿರಬಹುದು. ಆದರೆ ನೆಮ್ಮದಿ ಕೆಡಿಸುವ ಪುಟ್ಟ ಹಕ್ಕಿಗಳು ನಿಮ್ಮ ಬೆನ್ನ ಮೇಲೆ ಇದ್ದೇ ಇರುತ್ತವೆ. ಶಕ್ತಿ ಎಂದರೆ ಕೇವಲ ಹಣ, ಅಧಿಕಾರ ಅಲ್ಲ, ಎಲ್ಲವನ್ನೂ ತಾಳ್ಮೆಯಿಂದ ಸಹಿಸುವ ಗುಣ, ಏಕಾಗ್ರತೆಯಾಗಿದೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss