ಆಡಳಿತ ನೀಡಿದ್ದಲ್ಲಿ ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾ: ಶಾಸಕ ಬಂಡೆಪ್ಪ ಕಾಶೆಂಪೂರ್

ಹೊಸದಿಗಂತ ವರದಿ ಕಲಬುರಗಿ: 

ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಆಡಳಿತ ನೀಡಿದ್ದಲ್ಲಿ ರಾಜ್ಯದ ಎಲ್ಲಾ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಹಾಗೂ ನಾಡಿನ ಅನ್ನದಾತರಿಗೆ ದಿನದ 24 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಶಾಸಕ ಬಂಡೆಪ್ಪಾ ಕಾಶೆಂಪೂರ್‌ ಭರವಸೆ ನೀಡಿದರು. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರು ಆಶೀರ್ವಾದ ಮಾಡಿದರೆ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಲಿದ್ದಾರೆ. ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಸಂಪೂರ್ಣ ಬೇಜವಾಬ್ದಾರಿತನ ಮಾತನಾಡುತ್ತಿದೆ ಎಂದು ಹೇಳಿದರು.

ಸಹಕಾರ ಸಂಘಗಳಿಗೆ 24,000 ಕೋಟಿ ರೂಪಾಯಿ ಸಾಲ ಕೊಟ್ಟಿರುವುದಾಗಿ ಬೆನ್ನು ತಟ್ಟಿಕೊಳ್ಳುವ ಸರ್ಕಾರ ,ಈ ಹಿಂದೆ ಕೂಡ ಇಂತಹ ಕೆಲಸಗಳನ್ನು ಇತರೆ ಸರ್ಕಾರಗಳು ಮತ್ತು ನಮ್ಮ ಸರ್ಕಾರದ ಅವಧಿಯಲ್ಲಿ 14,000 ಕೋಟಿಗಳನ್ನು ವಾರ್ಷಿಕವಾಗಿ ನೀಡಲಾಗಿತ್ತು. ನಾವು ಅಧಿಕಾರಕ್ಕೆ ಬಂದ ತಕ್ಷಣವೇ 25,000 ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಜನ ಸಂಕಲ್ಪ- ಜನ ಸಂಕಲ್ಪ ಎಂದು ಆಯಾ ಜಾತಿ ಧರ್ಮಗಳ ಯಾತ್ರೆ ಮಾಡುವ ಮೂಲಕ ಬಿಜೆಪಿ ಏನು ಸಾಬೀತು ಮಾಡಲು ಹೊರಟಿದೆ ಎನ್ನುವುದು ಅರ್ಥವಾಗುತ್ತಿಲ್ಲ. ತಮ್ಮ ಅವಧಿಯಲ್ಲಿ ಜನರಿಗೆ ಒಳ್ಳೆಯದು ಮಾಡಬೇಕಾದದ್ದು ಪಕ್ಷದ ಅಥವಾ ಸರ್ಕಾರದ ಸಂಕಲ್ಪವೆ ಹೊರತು, ಅದು ಜನ ಸಂಕಲ್ಪ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಇನ್ನೊಂದು ಕಡೆ ಕೂಡ ಕಾಂಗ್ರೆಸ್ ಭಾರತ ಜೋಡು ಪಾದಯಾತ್ರೆ ಮಾಡುತ್ತಿರುವುದು ಕೂಡ ಅಚ್ಚರಿ ಮೂಡಿಸಿದೆ ಎಂದ ಅವರು , ಉಭಯ ಪಕ್ಷಗಳಿಂದ ಯಾವುದೇ ಹಂತದಲ್ಲಿ ಜನರಿಗೆ ಕಲ್ಯಾಣ ಸಾಧ್ಯವಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!