ಹೊಸದಿಗಂತ ವರದಿ, ಮೈಸೂರು:
ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಗಾಯಗೊಳಿಸಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯಲ್ಲಿ ನಡೆದಿದೆ.
ಎಚ್.ಡಿ.ಕೋಟೆ ಪಟ್ಟಣದ ಮುಸ್ಲಿಂ ಬ್ಲಾಕ್ನ ಮಹಮದ್ ಅಬಾನ್ (7) ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕ. ಈತ ಮನೆಯ ಹೊರಗೆ ಆಟವಾಡುತ್ತಿದ್ದಾರ ನಾಯಿಗಳು ದಾಳಿ ಮಾಡಿದವು. ಆತನ ಕಿರುಚಾಟ ಕೇಳಿದ ಅಕ್ಕ ಪಕ್ಕದ ನಿವಾಸಿಗಳು, ಮನೆಯವರು, ದಾರಿ ಹೋಕರು ಬೀದಿ ನಾಯಿಗಳನ್ನು ಓಡಿಸಿ, ಆತನನ್ನು ರಕ್ಷಿಸಿದರು. ಘಟನೆಯಲ್ಲಿ ಅಬಾನ್ ಮಂಡಿ ತೊಡೆ ಕೈಗೆ ಗಾಯಗಳಾಗಿದ್ದು, ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.