ನ್ಯೂಯಾರ್ಕ್‌ ನಗರದ ಪ್ರಖ್ಯಾತ ಬೀದಿಗೆ ಭಗವಾನ್‌ ಗಣೇಶನ ಹೆಸರು ನಾಮಕರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕದ ನ್ಯೂರ್ಯಾರ್ಕ್‌ ನಲ್ಲಿರುವ ಪ್ರಖ್ಯಾತ ದೇವಾಲಯದ ಹೊರ ಬೀದಿಗೆ ‘ಗಣೇಶ ಟೆಂಪಲ್ ಸ್ಟ್ರೀಟ್’ ಎಂದು ಹೆಸರಿಸಲಾಗಿದೆ. ಈ ಮೂಲಕ ಅಲ್ಲಿ ನಡೆಸಿರುವ ಹಿಂದೂ ಸಮುದಾಯಕ್ಕೆ ಆವಿಸ್ಮರಣೀಯ ಕೊಡುಗೆಯೊಂದು ಸಿಕ್ಕಿದೆ.
ಹಿಂದೂ ಟೆಂಪಲ್ ಸೊಸೈಟಿಯಿಂದ 1977 ರಲ್ಲಿ ಉತ್ತರ ಅಮೆರಿಕಾದ ಕ್ವೀನ್ಸ್ ಕೌಂಟಿಯ ಫ್ಲಶಿಂಗ್‌ನಲ್ಲಿ ಸ್ಥಾಪಿತವಾದ ʼಶ್ರೀ ಮಹಾ ವಲ್ಲಭ ಗಣಪತಿʼ ದೇವಾಲಯವು ಉತ್ತರ ಅಮೆರಿಕಾದ ಮೊದಲ ಮತ್ತು ಅತ್ಯಂತ ಹಳೆಯ ಹಿಂದೂ ದೇವಾಲಯವೆಂಬ ಪ್ರಖ್ಯಾತಿ ಹೊತ್ತಿದೆ. ದೇವಾಲಯದ ಹೊರಗಿನ ಬೀದಿಗೆ ಈ ವರೆಗೆ ಬೌನ್ ಸ್ಟ್ರೀಟ್ ಎಂಬ ಹೆಸರಿತ್ತು. ಕಪ್ಪು ವರ್ಣೀಯರ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಗುಲಾಮಗಿರಿ ವಿರೋಧಿ ಚಳುವಳಿಯಲ್ಲಿ ಹೋರಾಡಿದ ಜಾನ್ ಬೌನ್ ನ ಹೆಸರಿಡಲಾಗುತ್ತು.
ದೇವಾಲಯದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಗಣೇಶ ದೇಗುಲದ ಗೌರವಾರ್ಥವಾಗಿ ಬೀದಿಯ ಹೆಸರು ಬದಲಿಸಿ ‘ಗಣೇಶ ಟೆಂಪಲ್ ಸ್ಟ್ರೀಟ್’ ಎಂದು ನಾಮಕರಣ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಭಾರತದ ನ್ಯೂಯಾರ್ಕ್‌ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್, ಕ್ವೀನ್ಸ್ ಬರೋ ಅಧ್ಯಕ್ಷ ಡೊನೊವನ್ ರಿಚರ್ಡ್ಸ್, ನ್ಯೂಯಾರ್ಕ್ನ ಮೇಯರ್ ಎರಿಕ್ ಆಡಮ್ಸ್, ದಿಲೀಪ್ ಚೌಹಾಣ್ ಮತ್ತು ಭಾರತೀಯ- ಅಮೆರಿಕನ್ ಸಮುದಾಯದ ಸಾಕಷ್ಟು ಸಂಖ್ಯೆಯ ಜನರು ಹಾಜರಿದ್ದರು.
ಪುರೋಹಿತರು ಮತ್ತು ನೆರೆದಿದ್ದ ಜನರ ಸಮ್ಮುಖದಲ್ಲಿ ರಸ್ತೆ ಫಲಕವನ್ನು ಅನಾವರಣಗೊಳಿಸಿದ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕ್ವೀನ್ಸ್ ಬರೋ ಅಧ್ಯಕ್ಷ ಡೊನೊವನ್ ರಿಚರ್ಡ್ಸ್, ಫ್ಲಶಿಂಗ್‌ನಲ್ಲಿರುವ ಬೋನ್ ಸ್ಟ್ರೀಟ್ ಈಗ ಗಣೇಶ್ ಟೆಂಪಲ್ ಸ್ಟ್ರೀಟ್ ಎಂದು ನಾಮಕರಣಗೊಂಡಿದೆ. ನಮ್ಮ ಕುಟುಂಬಗಳನ್ನು ಆಧ್ಯಾತ್ಮಿಕವಾಗಿ ಬೆಂಬಲಿಸಲು ಮತ್ತು ನಮ್ಮ ಆತ್ಮವನ್ನು ಔನತ್ಯಕ್ಕೇರಿಸಲು ಶ್ರಮಿಸುತ್ತಿರುವ ಉತ್ತರ ಅಮೆರಿಕಾದ ಹಿಂದೂ ಟೆಂಪಲ್ ಸೊಸೈಟಿಯ ಪ್ರತಿಯೊಬ್ಬ ಸದಸ್ಯರಿಗೂ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!