SHORT STORY | ಒತ್ತಡಗಳು ನೀರಿರುವ ಗಾಜಿನ ಲೋಟದಂತೆ, ಹೆಚ್ಚು ಹೊತ್ತು ಇದ್ರೆ ಮಾತ್ರ ಭಾರ!

ಸೈಕಾಲಜಿ ಪ್ರೊಫೆಸರ್ ಒಬ್ಬರು ಪಾಠ ಮಾಡುವ ಮಧ್ಯೆ, ಒಂದು ಲೋಟ ತೆಗೆದುಕೊಂಡು ಅದಕ್ಕೆ ನೀರು ತುಂಬಿಸಿದ್ರು. ಇದೀಗ ಈ ಲೋಟದ ತೂಕ ಎಷ್ಟು ಎಂದು ವಿದ್ಯಾರ್ಥಿಗಳಿಗೆ ಕೇಳಿದ್ರು. ಸರ್, 250 ಎಮ್.ಎಲ್ ನೀರು, ಒಂದು 200 ಗ್ರಾಂ ಲೋಟದ ತೂಕ ಇರಬಹುದು ಎಂದು ವಿದ್ಯಾರ್ಥಿಗಳು ಹೇಳಿದ್ರು.

ಟೆಕ್ನಿಕಲಿ ನೀವು ಹೇಳಿದ್ದು ಸರಿ, ಆದರೆ ಇದರ ತೂಕ ನಿರ್ಧಾರ ಆಗೋದು ಸಮಯದ ಮೇಲೆ. ಎರಡು ನಿಮಿಷ ಇಟ್ಟುಕೊಂಡಾಗ ಇದು ಲೈಟ್ ವೇಟ್, 20 ನಿಮಿಷಕ್ಕೆ ಸ್ವಲ್ಪ ಭಾರ, 2 ಗಂಟೆಗೆ ಕೈ ನೋವು, ಎರಡು ದಿನಕ್ಕೆ ಅಸಾಧ್ಯ ಅಲ್ವಾ ಎಂದರು.

ಈ ಗಾಜಿನ ಲೋಟ ನಮ್ಮ ಸಮಸ್ಯೆಗಳು ಹಾಗೂ ಒತ್ತಡಗಳಂತೆ, ಹೆಚ್ಚು ಆಲೋಚನೆ ಮಾಡ್ತಾ, ಹೆಚ್ಚು ಸಮಯ ಅದನ್ನು ಮನಸಿನಲ್ಲೇ ಇಟ್ಟುಕೊಂಡ್ರೆ ಅದರ ಭಾರ ಹೆಚ್ಚುತ್ತಲೇ ಇರುತ್ತದೆ ಎಂದು ಹೇಳಿದರು.

ಹೌದಲ್ವಾ? ನಮ್ಮ ಸಮಸ್ಯೆಗಳು ನವಿಲುಗರಿಯಷ್ಟೇ ತೂಕ ಇದ್ದರೂ, ಅದನ್ನು ಯೋಚಿಸಿ, ದೊಡ್ಡದು ಮಾಡಿಕೊಂಡು ಬಂಡೆ ತೂಕ ಮಾಡಿಬಿಡುತ್ತೇವೆ. ಯಾವುದೇ ಸಮಸ್ಯೆಯನ್ನು ಮನಸ್ಸಿಗೆ ಹಾಕಿಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!