Monday, August 15, 2022

Latest Posts

ಕಠಿಣ ಲಾಕ್‌ಡೌನ್- ನಿಯಮ ಪಾಲಿಸದಿದ್ದರೆ ಕ್ರಮ: ಎಸ್ಪಿ ಎಚ್ಚರಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ವರದಿ, ಮಂಡ್ಯ:

ಕೊರೊನಾ ನಿಯಂತ್ರಿಸಲು ಲಾಕ್‌ಡೌನ್ ಜಾರಿ ಮಾಡಿರುವ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮೇ 10ರಿಂದ 24ರವರೆಗೆ ಕಠಿಣ ನಿಯಮಗಳನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ವಾಹನಗಳು ರಸ್ತೆಗಿಳಿದರೆ ವಶಪಡಿಸಿಕೊಳ್ಳಲಾಗುವುದು. ವಶಪಡಿಸಿಕೊಂಡ ವಾಹನಗಳ ಮೇಲೆ ಪಿಎಸ್ ಪ್ರಕರಣ ದಾಖಲಿಸಲಾಗುವುದು. ಆಗ ವಾಹನಗಳ ಮಾಲೀಕರು ನ್ಯಾಯಾಲಯದಲ್ಲಿಯೇ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
11 ಚೆಕ್ ಪೋಸ್ಟ್
ಜಿಲ್ಲೆಯ 11 ಕಡೆ ಅಂತರ ಜಿಲ್ಲಾ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ಮದ್ದೂರಿನ ನಿಡಘಟ್ಟ ಗಡಿ, ಕೆಸ್ತೂರು-ಮಲ್ಲನಕುಪ್ಪೆ ಗೇಟ್, ಹಲಗೂರು-ದೇವಿರಹಳ್ಳಿ ಗೇಟ್, ಬೆಳಕವಾಡಿ-ಸಂತೇಗಾಲ ಹ್ಯಾಂಡ್ ಪೋಸ್ಟ್, ಕಿರುಗಾವಲು-ಬೆಂಡರವಾಡಿ ಗ್ರಾಮ, ನಗುವನಹಳ್ಳಿ-ಬಾರ್ಡರ್, ಅರಕೆರೆ-ಹಂಪಾಪುರ, ಕೆ.ಆರ್.ಸಾಗರ ಪೇಪರ್ ಮಿಲ್ ಸರ್ಕಲ್, ಬೆಳ್ಳೂರು-ಲಾಂಕೋಟೋಲ್, ಬೆಳ್ಳೂರು-ಕದಬಹಳ್ಳಿ ಟೋಲ್, ಕಿಕ್ಕೇರಿ-ಆನೆಗೋಳ ಗ್ರಾಮದ ಬಳಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗುವುದು. ಜಿಲ್ಲೆ ಪ್ರವೇಶಿಸುವ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಇದರ ಜತೆಗೆ ನಗರದ
ಹಾಗೂ ಪಟ್ಟಣಗಳಲ್ಲೂ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss