Wednesday, August 17, 2022

Latest Posts

ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಹೊಸದಿಗಂತ ವರದಿ, ಹಾಸನ:

ಶಿಕ್ಷಣ ವ್ಯವಸ್ಥೆಯ ಬಗ್ಗೆ ಮನನೊಂದು, ಆತ್ಮಹತ್ಯೆ ನಿಧಾ೯ರ ಮಾಡಿರುವುದಾಗಿ ವಿಡಿಯೋ ಮಾಡಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊರವಲಯದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್​ನಲ್ಲಿ ನಡೆದಿದೆ.
ಅರಸೀಕೆರೆಯ ಹಿರಿಯಾಳು ಗ್ರಾಮದ ನಿವಾಸಿ ಹೇಮಂತ್ ಗೌಡ (20) ಮೃತ ವಿದ್ಯಾರ್ಥಿ. ತೋಪೇಗೌಡ ಮತ್ತು ಜಯಂತಿ ದಂಪತಿ ಪುತ್ರನಾಗಿರುವ ಹೇಮಂತ್ ಗೌಡ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಈಗಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮನನೊಂದ ಹೇಮಾಂತ್​ ತಾನು ತಂಗಿದ್ದ ಹಾಸ್ಟೆಲ್​ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಯುವ ಮುನ್ನ ವಿಡಿಯೋ ಮಾಡಿರುವ ಹೇಮಂತ್, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಆಗಲಿ. ಈಗಿನ ಎಜುಕೇಶನ್ ಸಿಸ್ಟಮ್​ ಇದ್ದರೂ ಇಲ್ಲದಂತಾಗಿದೆ. ಸಿಎಂ, ವಿಸಿಗಳು, ಎಲ್ಲಾ ಪಕ್ಷದ ದೊಡ್ಡ ದೊಡ್ಡ ಗಣ್ಯಾತಿಗಣ್ಯರು ಈ ಸಿಸ್ಟಮ್ ಬದಲಾವಣೆಗೆ ಬೆಂಬಲ ಕೊಡಿ. ಎಲ್ಲಾ ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಅಪ್ಲೋಡ್​ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.
ನನ್ನ ಸಾವಿನ ನಂತರ ಅಂಗಾಂಗ ದಾನ ಮಾಡಿ. ನನ್ನ ಅಂತ್ಯಕ್ರಿಯೆಯಲ್ಲಿ ಸಿಎಂ, ಶಿಕ್ಷಣ ಸಚಿವರು, ಆದಿ ಚುಂಚನಗಿರಿ ಶ್ರೀಗಳು ಬಾಗಿ ಆಗಬೇಕು ಎಂದು 13 ನಿಮಿಷದ ವಿಡಿಯೊದಲ್ಲಿ ಹೇಮಂತ್ ಮನವಿ ಮಾಡಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!