Tuesday, August 16, 2022

Latest Posts

ವಿದ್ಯುತ್ ಅವಘಡದಿಂದ ವಿದ್ಯಾರ್ಥಿ ಸಾವು: ಪರಿಹಾರಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಹೊಸ ದಿಗಂತ ವರದಿ, ಮಂಗಳೂರು:

ವೆನ್ಲಾಕ್ ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಪಾರ್ಟ್ ಟೈಮ್ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಪಿಟಿ ಕಾಲೇಜಿನ ಸಿವಿಲ್ ವಿಭಾಗದ
ಅಂತಿಮ ವರ್ಷದ ವಿದ್ಯಾರ್ಥಿ ಅನಿಶ್ ಬಿ ಸುವರ್ಣ ಅವರ ಸಾವಿನ ಕುರಿತು ತನಿಖೆ ನಡೆಸಿ ವಿದ್ಯಾರ್ಥಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಘಟಕದ ವತಿಯಿಂದ ಬುಧವಾರ ವೆನ್ಲಾಕ್ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಯಿತು.
ಕ್ಯಾಂಟೀನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಅವಘಡ ಉಂಟಾಗಿ ಅನೀಶ್ ಮೃತಪಟ್ಟಿದ್ದ. ಈ ಸಾವಿಗೆ ಕ್ಯಾಂಟೀನ್ ಟೆಂಡರ್ ವಹಿಸಿಕೊಂಡಿರುವ ಮಾಲಕರ ಬೇಜವಾಬ್ದಾರಿತನದಿಂದ ಈ ದುರ್ಘಟನೆ ಸಂಭವಿಸಿದೆ. ಈ ಹಿಂದೆಯೂ ಹಲವರಿಗೆ ವಿದ್ಯುತ್ ಶಾಕ್ ತಗುಲಿದ್ದು, ಅವರು ಮಾಲಕರ ಗಮನಕ್ಕೆ ತಂದಿದ್ದರು. ಆದರೆ ಮಾಲಕರು ನಿರ್ಲಕ್ಷ್ಯ ವಹಿಸಿದ್ದರಿಂದ ಅಮಾಯಕ ವಿದ್ಯಾರ್ಥಿಯ ಬಲಿಯಾಗಿದೆ. ಆತನ ಸಾವಿಗೆ ನ್ಯಾಯ ದೊರೆಯಲೇಬೇಕು ಎಂದು ಎಬಿವಿಪಿ ಆಗ್ರಹಿಸಿದೆ.
ವಿದ್ಯಾರ್ಥಿ ಪರಿಷತ್‌ನ ವಿದ್ಯಾರ್ಥಿಗಳು ಆಸ್ಪತ್ರೆಯ ಎದುರು ಧರಣಿ ಕುಳಿತ ಸ್ಥಳಕ್ಕೆ ಬೇಟಿ ನೀಡಿದ ಜಿಲ್ಲಾ ಶಸ್ತ್ರ ಚಿಕಿತ್ಸಾ ವೈದ್ಯರು 15 ದಿನಗಳ ಒಳಗಾಗಿ ಸೂಕ್ತ ಕ್ರಮದೊಂದಿಗೆ ನ್ಯಾಯ ಒದಗಿಸುವ ಭರವಸೆಯನ್ನು ಪ್ರತಿಭಟನಾಕಾರರಿಗೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ, ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ನಗರ ಸಹಕಾರ್ಯದರ್ಶಿ ಶ್ರೇಯಸ್ ರೈ, ಕೆ.ಪಿ.ಟಿ ಘಟಕದ ಅಧ್ಯಕ್ಷ ಆದರ್ಶ, ಕಾರ್ಯದರ್ಶಿ ಚೇತನ್ ಹಾಗೂ ಪ್ರಮುಖರಾದ ಆದಿತ್ಯ ಶೆಟ್ಟಿ, ಆದಿತ್ಯ ಕೆ.ಆರ್, ಭವನೀಶ್ ಶೆಟ್ಟಿ , ಸಂತೋಷ್ ನಾಯ್ಕ್, ರಜತ್, ಹರ್ಷಿತ್, ಧನುಷ್, ಹೃತಿಕ್, ಪ್ರಜ್ವಲ್, ರಕ್ಷಿತ ಮತ್ತು ಚಂದ್ರಿಕಾ ವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss