spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಷ್ಟ್ರ ನಿರ್ಮಾಣದ ಆಶಯದಲ್ಲಿ ಹೀಗೊಂದು ವಿದ್ಯಾರ್ಥಿ ನಿಧಿ: ಇಲ್ಲಿದೆ ರಾಜ್ಯವ್ಯಾಪಿ ಸೇವಾಯೋಜನೆಯೊಂದರ ವಿವರ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಆರೆಸ್ಸೆಸ್ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಭಾರತಿ ಸಂಘಟನೆಯ ಸಹಯೋಗದೊಂದಿಗೆ ಸತ್ಯಸಾಯಿ ಬಾಬಾರ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ‘ಭಾರತ್ ರಾಷ್ಟ್ರ ನಿರ್ಮಾಣ ವಿದ್ಯಾರ್ಥಿ ನಿಧಿ’ಯನ್ನು ಪ್ರಾರಂಭಿಸಿದೆ. ರಾಜ್ಯವ್ಯಾಪಿ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಚಾಲನೆ ಸಿಕ್ಕಿದೆ. ಈ ಯೋಜನೆ ಯಾಕಾಗಿ, ಯಾರಿಗಾಗಿ ಅಂತ ನೀವೇ ತಿಳಿದುಕೊಳ್ಳಿ…

ಉನ್ನತ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ಅರ್ಹತೆ ಅಥವಾ ವಿಷಯ ಆಧಾರಿತ ಅನೇಕ ವಿದ್ಯಾರ್ಥಿವೇತನ ಯೋಜನೆಗಳಿವೆ. ಆದರೆ ವಿದ್ಯಾಭ್ಯಾಸದ ಪ್ರಾಥಮಿಕ ತಳಹದಿಯ ಮಟ್ಟದಲ್ಲಿ ಬಹುತೇಕ ಯಾವುದೇ ವಿದ್ಯಾರ್ಥಿವೇತನ ಯೋಜನೆಗಳಿಲ್ಲ. ಈ ನಿಟ್ಟಿನಲ್ಲಿ ಪ್ರಸ್ತುತ ಶ್ರೀಸತ್ಯಸಾಯಿ ಲೋಕ ಸೇವಾ ಗುರುಕುಲಂ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್‌ಗಳ 26 ಕ್ಯಾಂಪಸ್‌ಗಳನ್ನು ನಿರ್ವಹಿಸುತ್ತಿರುವ ಪ್ರಶಾಂತಿ ಬಾಲಮಂದಿರ ಟ್ರಸ್ಟ್, ಮಕ್ಕಳ ಶಿಕ್ಷಣಕ್ಕಾಗಿ ತನ್ನ ಶಕ್ತಿ, ಆರ್ಥಿಕತೆ ಸಾಮರ್ಥ್ಯ ಮತ್ತು ದಕ್ಷತೆಯಿಂದ ಕೆಲಸ ಮಾಡುವ ವಾಗ್ದಾನ ಮಾಡಿದೆ.

ರಾಜ್ಯದ 5000 ಮಕ್ಕಳಿಗೆ ಸ್ಕಾಲರ್‌ಶಿಪ್: ಹೊಸ ವಿದ್ಯಾರ್ಥಿ ವೇತನ ಯೋಜನೆಯ ಪ್ರಯೋಜನವನ್ನು ಇಡೀ ಕರ್ನಾಟಕದ ವಿದ್ಯಾರ್ಥಿಗಳು ಪಡೆಯಬಹುದು. ಒಂದರಿಂದ 5ನೇ ತರಗತಿಯವರೆಗೆ 5000 ವಿದ್ಯಾರ್ಥಿಗಳು (ಬಾಲಕರು ಮತ್ತು ಬಾಲಕಿಯರು) 2021-22ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುತ್ತಾರೆ. ಆದರೆ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಓದುತ್ತಿರಬೇಕು. ಪ್ರತೀ ತರಗತಿಗೆ 1000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳು ತಮ್ಮ 12ನೇ ತರಗತಿಯನ್ನು ಮುಗಿಸುವವರೆಗೆ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.

8ರಲ್ಲಿ ಒಬ್ಬರಿಗೆ ಶುಲ್ಕ ಭರಿಸಲಾಗುತ್ತಿಲ್ಲ: ಭಾರತದಲ್ಲಿ 6 ರಿಂದ 14 ವರ್ಷದೊಳಗಿನ ಅರ್ಧಕ್ಕಿಂತ ಕಡಿಮೆ ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಾರೆ. ಒಂದನೇ ತರಗತಿಗೆ ದಾಖಲಾದ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರ 8ನೇ ತರಗತಿ ತಲುಪುತ್ತಾರೆ. ಈ ವಯೋಮಾನದ ಕನಿಷ್ಠ 35 ಮಿಲಿಯನ್ ಮಕ್ಕಳು ಶಾಲೆಗೆ ಹೋಗುವುದೇ ಇಲ್ಲ. ಆಘಾತಕಾರಿ ಸಂಗತಿ ಎಂದರೆ, 5 ರಿಂದ 9 ವರ್ಷದೊಳಗಿನ ಶೇ. 53 ಹುಡುಗಿಯರಿಗೆ ಶಿಕ್ಷಣವಿಲ್ಲ. ಶಿಕ್ಷಣದ ವೆಚ್ಚ ಭರಿಸಲಾಗದೇ ಮುಂದಿನ ತರಗತಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲದೇ ಶಾಲೆ ಅಥವಾ ಕಾಲೇಜಿಗೆ ದಾಖಲಾದ ಪ್ರತಿ ಎಂಟು ವಿದ್ಯಾರ್ಥಿಗಳಲ್ಲಿ ಒಬ್ಬರು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಾರೆ ಎಂದು ಭಾರತ ಸರಕಾರದ ರಾಷ್ಟ್ರೀಯ ಅಂಕಿಅಂಶ ಕಚೇರಿ ನಡೆಸಿದ ಸಮೀಕ್ಷೆಯ ವರದಿ ಹೇಳುತ್ತದೆ.

ಸ್ಕಾಲರ್‌ಶಿಪ್‌ಗೆ ‘ಆವಶ್ಯಕತೆ’ ಮಾನದಂಡ: ಆದ್ದರಿಂದ ಭಾರತ್ ರಾಷ್ಟ್ರ ನಿರ್ಮಾಣ ವಿದ್ಯಾರ್ಥಿ ನಿಧಿ ಸ್ಕಾಲರ್‌ಶಿಪ್‌ಗೆ ಮಕ್ಕಳನ್ನು ಆಯ್ಕೆ ಮಾಡುವ ಏಕೈಕ ಮಾನದಂಡವೆಂದರೆ, ಅವರ ‘ಆವಶ್ಯಕತೆ’. ಅದರ ಹೊರತು ಲಿಂಗ, ಜಾತಿ ಅಥವಾ ಧರ್ಮ ಇದ್ಯಾವ ಆಧಾರಿತವೂ ಅಲ್ಲ. ಈ ಯೋಜನೆಯ ಮುಖ್ಯ ಉದ್ದೇಶ, ಪ್ರಾಥಮಿಕ ಶಾಲಾ ಶಿಕ್ಷಣದ ದಾಖಲಾತಿ ಮತ್ತು ಗುಣಮಟ್ಟವನ್ನು ಸುಧಾರಿಸಲು 12ನೇ ತರಗತಿಯವರೆಗೆ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು.

ಚಿಕ್ಕಬಳ್ಳಾಪುರದಲ್ಲಿ ಪ್ರಾಯೋಗಿಕ ಚಾಲನೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಸೇವಾ ಭಾರತಿ ಸಂಘಟನೆಯ ಸಹಯೋಗದೊಂದಿಗೆ ಈಗಾಗಲೇ ಪ್ರಾಯೋಗಿಕ ಯೋಜನೆ ಪ್ರಾರಂಭವಾಗಿದೆ. ರಾಷ್ಟ್ರೀಯ ಸೇವಾ ಭಾರತಿ ಸಂಘಟನೆಯ ಸ್ವಯಂಸೇವಕರು ಸ್ಕಾಲರ್‌ಶಿಪ್ ಯೋಜನೆಯಡಿಯಲ್ಲಿ ಆಯ್ಕೆಯಾದ ಪ್ರತಿ ಮಗುವಿನ ಪ್ರಗತಿ ಮತ್ತು ಸಮಗ್ರ ಯೋಗಕ್ಷೇಮದ ಬಗ್ಗೆ ನಿಗಾ ವಹಿಸುತ್ತಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಕೃಷ್ಣ ಗೋಪಾಲ್ ಅವರು ಈ ವಿದ್ಯಾರ್ಥಿವೇತನ ಯೋಜನೆಗೆ ಚಾಲನೆ ನೀಡಿದರು. ಶ್ರೀಸತ್ಯಸಾಯಿ ಬಾಬಾರವರ ಶಿಷ್ಯ ಶ್ರೀಮಧುಸೂದನ ಸಾಯಿ ಅವರ ಸಮ್ಮುಖದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 120 ಮಕ್ಕಳಿಗೆ ವೈಯಕ್ತಿಕವಾಗಿ ಸ್ಕಾಲರ್‌ಶಿಪ್ ಹಸ್ತಾಂತರಿಸಲಾಯಿತು.

ಪ್ರಾಥಮಿಕ ಶಾಲಾ ಹಂತದಲ್ಲಿ ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯಬೇಕು. ಆದ್ದರಿಂದ ಭಾರತ ರಾಷ್ಟ್ರ ನಿರ್ಮಾಣ ವಿದ್ಯಾರ್ಥಿ ನಿಧಿಯು ಐದು ವರ್ಷ ವಯಸ್ಸಿನ ಪ್ರತಿ ಮಗುವಿಗೂ ಶಿಕ್ಷಣ ನೀಡಬೇಕೆಂಬ ಗುರಿಯನ್ನು ಹೊಂದಿದೆ. ಹೀಗೆ ಉಚಿತ ಶಿಕ್ಷಣ ನೀಡಿ ಮಕ್ಕಳನ್ನು ಸಬಲೀಕರಣಗೊಳಿಸುವ ಮೂಲಕ ಬಲಿಷ್ಠ ಭಾರತವನ್ನು ನಿರ್ಮಿಸುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss