ಹೊಟ್ಟೆನೋವು ಎಂದು ಶೌಚಕ್ಕೆ ಹೋದ ವಿದ್ಯಾರ್ಥಿನಿಗೆ ಗಂಡು ಮಗು ಜನನ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೊಟ್ಟೆ ನೋವಿನಿಂದ ಶೌಚಕ್ಕೆ ತೆರಳಿದ್ದ ಯುವತಿ ಆಕಸ್ಮಿಕವಾಗಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದಿದದೆ. ಅಲ್ಲಿನ ವಿಶ್ವವಿದ್ಯಾನಿಲಯದ 20 ವರ್ಷದ ವಿದ್ಯಾರ್ಥಿ ಜೆಸ್ ಡೇವಿಸ್‌ಗೆ ಅನಿರೀಕ್ಷಿತ ಹೆರಿಗೆಯಾಗಿದೆ. ಋತುಚಕ್ರ ಸರಿಯಾಗಿ ಬರದ ಕಾರಣ ಹೊಟ್ಟೆ ನೋವು ಬರುತ್ತಿದೆ ಅಂದುಕೊಂಡ ಯುವತಿಗೆ ನಿಜಕ್ಕೂ ಶಾಕ್‌ ಆಗಿದೆ. ಸೌಥಾಂಪ್ಟನ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಯಾವುದೇ ರೀತಿಯ ಗರ್ಭಾವಸ್ಥೆಯ ಲಕ್ಷಣಗಳ ಕಂಡುಬಂದಿಲ್ಲ, ಆದರೂ ಮಗುವಿಗೆ ಜನ್ಮ ನೀಡಿರುವುದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ.

ಜೂನ್ 11 ರಂದು ಹೆರಿಗೆಯಾಗಿದ್ದು, 3 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾಳೆ. “ನಾನು ಮಗುವಿಗೆ ಜನ್ಮ ನೀಡಿರುವುದು ನನ್ನ  ಜೀವನದಲ್ಲಿ ದೊಡ್ಡ ಆಘಾತ. ಮಗು ಅಳುವಿನ ಕೂಗು ಕೇಳುವವರೆಗೂ ನಿಜವೆಂದು ಅರಿಯಲಾಗಲಿಲ್ಲ. ಇದೆಲ್ಲ ನನ್ನ ಕನಸು ಎಂದೇ ಭಾವಿಸಿದ್ದೆ. ಈಗ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ. ಮೊದಲು ಶಾಕ್‌ ಆದರೂ ಈಗ ನನ್ನ ಸಂತೋಷ ಉತ್ತುಂಗದಲ್ಲಿದೆ ಎಂದಿದ್ದಾರೆ.

ಡೆಲಿವರಿಗೂ ಮುನ್ನಾದಿನ ನನ್ನ ಹುಟ್ಟುಹಬ್ಬದ ಪಾರ್ಟಿ ಇತ್ತು. ಸಿಕ್ಕಾಪಟ್ಟೆ ಆಯಾಸ, ನೋವು ಇದೆಲ್ಲದರ ಹಿಂದಿನ ಉದ್ದೇಶ ಅರ್ಥವಾಗಲಿಲ್ಲ. ಋತುಚಕ್ರದ ಏರಿಳಿತದಿಂದಾಗಿ ಈ ರೀತಿ ಆಗುತ್ತಿದೆ ಎಂದು ನಾನು ಭಾವಿಸಿದ್ದೆ. ಬರ್ತಡೇ ಮರುದಿನ ಸ್ನಾನ ಮಾಡಿದರೆ ಆಯಾಸ ಕಡಿಮೆಯಾಗಬಹುದು ಎಂದುಕೊಂಡೆ, ಆದರೆ ನೋವು ಮತ್ತಷ್ಟು ಹೆಚ್ಚಾಯಿತು. ಶೌಚಾಲಯಕ್ಕೆ ಹೋದ ನಂತರವೂ ನನಗೆ ನಿಜವಾಗಿ ಏನು ನಡೆಯುತ್ತಿದೆ ಎಂದು ಅರ್ಥವಾಗಲಿಲ್ಲ. ನನ್ನ ಮಗನ ಅಳುವಿನ ಶಬ್ಧ ಕೇಳಿದಾಗಲೆ ಗೊತ್ತಾಗಿದ್ದು ನಾನು ತಾಯಿಯಾಗಿದ್ದೇನೆ ಅಂತ.

ಈ ವಿಚಾರವನ್ನು ನನ್ನ ಸ್ನೇಹಿತರಿಗೆ ತಿಳಿಸಿದ ಕೂಡಲೇ ಆಂಬುಲೆನ್ಸ್‌ ಕರೆತಂದು ಆಸ್ಪತ್ರೆಗೆ ಸೇರಿಸಿದ್ರು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!