ವೈರಲ್​ ಆಗ್ತಿದೆ ವಿದ್ಯಾರ್ಥಿ ರಜಾ ಚೀಟಿ: ನಾವು ಕಾಪಿ ಮಾಡುವೆ ಎಂದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿದ್ಯಾರ್ಥಿಗಳು ಶಾಲೆ, ಕಾಲೇಜಿಗಳಲ್ಲಿ ರಜೆ ಕೇಳಬೇಕಾದರೆ ಮನವಿ ಪತ್ರ ನೀಡುವುದು ರೂಢಿ. ಸ್ಪಷ್ಟ ವಿಷಯ ತಿಳಿಸಿ ಶಾಲಾ ಅಧ್ಯಾಪಕರಿಗೆ ರಜೆ ಚೀಟಿ ನೀಡಿ ರಜೆಯನ್ನು ಮಾಡುತ್ತಾರೆ.

ಅದೇ ರೀತಿ ಇಲ್ಲಿ ಒಬ್ಬ ಶಾಲಾ ವಿದ್ಯಾರ್ಥಿ ನೀಡಿರುವ ರಜೆ ಚೀಟಿ ಭಾರಿ ವೈರಲ್​ ಆಗಿದ್ದು, ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿ ಅರ್ಪಿತ್ ವರ್ಮಾ ಅವರು ರಜೆ ಚೀಟಿಯನ್ನು ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದ ಬುಂದೇಲ್‌ಖಂಡ್‌ ಮೂಲದ ವಿದ್ಯಾರ್ಥಿ ಕಲುವಾ ಎಂಬಾತ ಬುಂದೇಲಿ ಭಾಷೆಯಲ್ಲಿ ರಜೆ ಚೀಟಿ ಬರೆದಿದ್ದಾನೆ. ಇದರಲ್ಲಿ ಜ್ವರದ ಹಿನ್ನೆಲೆಯಲ್ಲಿ ತನಗೆ ರಜೆ ನೀಡುವಂತೆ ಕೋರಿಕೊಂಡಿದ್ದಾನೆ.

 

ಇಲ್ಲಿ ಈತ ಬರೆದ ರೀತಿ ಹಾಗೂ ಸ್ಟೈಲ್​ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ನಾನು ಕೂಡ ಇದನ್ನೇ ಕಾಪಿ ಮಾಡುವೆ ಎಂದು ಹೇಳುತ್ತಿದ್ದಾರೆ.

ಅಷ್ಟಕ್ಕೂ ಆತ ಬರೆದ ಅಂದರೆ, ‘ಪ್ರೀತಿಯ ಸಾರ್, ಕಳೆದ ಎರಡು ದಿನಗಳಿಂದ ನನಗೆ ಜ್ವರ ಬರುತ್ತಿದೆ. ಸಾಲದು ಎಂಬುದಕ್ಕೆ ಮೂಗು ಕೂಡ ಸೋರುತ್ತಿದೆ. ನನಗೆ ಎರಡರಿಂದ ನಾಲ್ಕು ದಿನ ರಜೆ ನೀಡುವಂತೆ ನಾನು ವಿನಂತಿಸುತ್ತೇನೆ. ನಾನು ಇಲ್ಲದಿದ್ದರೂ ಶಾಲೆ ನಡೆಯುತ್ತದೆ, ಅದನ್ನು ಮುಚ್ಚಲಾಗುವುದಿಲ್ಲ, ಇಂತಿ ನಿಮ್ಮ ಪ್ರಾಮಾಣಿಕ – ಕಲುವಾ’ ಎಂದು ಬರೆದಿದ್ದಾನೆ. ಇದೀಗ ಈ ರಜೆ ಚೀಟಿ ಎಲ್ಲೆಡೆ ವೈರಲ್ ಆಗಿದ್ದು, ಅನೇಕರು ಇಷ್ಟಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!