ಹಿಜಾಬ್ ಧರಿಸಿ ಪ್ರಾರ್ಥನೆ ಸಲ್ಲಿಸಿದ ವಿದ್ಯಾರ್ಥಿಗಳು

ದಿಗಂತ ವರದಿ ಕಲಬುರಗಿ:

ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಹಿಜಾಬ್ ಧರಿಸಿ, ಪ್ರಾಥ೯ನೆ ಸಲ್ಲಿಸಿದ ಘಟನೆ ಕಲಬುರಗಿ ನಗರದ ನ್ಯೂ ನೋಬೆಲ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆದಿದೆ.

ಹೈಕೋರ್ಟ್ ಆದೇಶದ ಮಧ್ಯೆಯೂ ಸಹ ಮಕ್ಕಳಿಗೆ ಹಿಜಾಬ್ ಹಾಕಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು, ನೂರಕ್ಕೂ ಅಧಿಕ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದಾರೆ.

ಇನ್ನೂ ಕಲಬುರಗಿ ನಗರದ ಜಗತ ವೃತ್ತದ ಬಳಿಯಿರುವ ಉದು೯ ಶಾಲೆಗೆ ಹಿಜಾಬ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಗೈರಾದ ಪ್ರಸಂಗ ನಡೆದಿದೆ. 8ನೇ ತರಗತಿ,9 ಹಾಗೂ 10ನೇ ತರಗತಿಯ 80ಕ್ಕೂ ಅಧಿಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶಾಲೆಯ ಶಿಕ್ಷಕರು ಎಂದಿನಂತೆ ಆಗಮಿಸಿದರೂ, ಉದು೯ ಶಾಲೆಯ ತರಗತಿಗಳು ಮಾತ್ರ ಖಾಲಿ ಖಾಲಿಯಾಗಿದ್ದವು. ಮಕ್ಕಳು ಶಾಲೆಗೆ ಬಾರದ ಹಿನ್ನೆಲೆಯಲ್ಲಿ ಆನಲೈನ ಮೂಲಕ ಪಾಠವನ್ನು ಶಿಕ್ಷಕರು ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!