ಪಾಠ ಬೇಕಂದ್ರೆ ಜೀವದ ಹಂಗು ತೊರೆಯಲೇಬೇಕು: ಪುಟಾಣಿಗಳ ಕಷ್ಟ ಮನಕಲಕುವಂತಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ‌

ಕೆಲವು ಮಕ್ಕಳೀಗೆ ಎಲ್ಲಾ ಸೌಲಭ್ಯಗಳಿದ್ದರೂ ಶಾಲೆಗೆ ಹೋಗಲು ಇನ್ನಿಲ್ಲದ ನಾಟಕ ಮಾಡ್ತಾರೆ. ಆದರೆ ಈ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವವನ್ನೇ ಮುಡುಪಾಗಿಡುವ ಸಂದರ್ಭ ಬಂದೊದಗಿದೆ. @cctvidiots ಎಂಬ ಟ್ವಿಟ್ಟರ್ ಬಳಕೆದಾರ ಶೇರ್ ಮಾಡಿರುವ ಈ ವಿಡಿಯೋದಲ್ಲಿ ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ನದಿ ದಾಟುತ್ತಿರುವ ವಿಡಿಯೋ ಬೆಚ್ಚಿ ಬೀಳಿಸುವಂತಿದೆ. ಹಗ್ಗ ತುಂಡಾದರೂ ಮಕ್ಕಳ ಪ್ರಾಣ ಹೋಗುತ್ತೆ. ದಿನವೂ ಹಾಗೆ ಓಡಾಡಬೇಕಾದರೂ ಓದಲು ಸಾಧ್ಯವಾಗುತ್ತಿಲ್ಲ. ಈ ಸ್ಥಳ ಎಲ್ಲಿದೆ? ಏನು ವಿವರ ತಿಳಿಯದಿದ್ದರೂ ನೋಡಿದವರ ಮನಸ್ಸು ಕಂಪಿಸುತ್ತಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಆ ಕಾಲುವೆ ಮೇಲೆ ಸೇತುವೆ ನಿರ್ಮಾಣವೇ ಆಗಿಲ್ಲ..ಆ ಮಕ್ಕಳಿಗೆ ದಿನವೂ ಸಾಹಸವೇ ಸರಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇಂತಹ ವೀಡಿಯೋಗಳನ್ನು ನೋಡಿದರೆ ಭಯವಾಗುತ್ತದೆ. ಅದೇ ಹೊತ್ತಿನಲ್ಲಿ ಆ ಮಕ್ಕಳ ಹಂಬಲ ಏನಿದ್ದರೂ ಓದಬೇಕು ಅನ್ನುವ ಹಠವನ್ನು ಮೆಚ್ಚಲೇಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!