Friday, June 2, 2023

Latest Posts

ಅಕ್ಷರ ಜ್ಞಾನವಿಲ್ಲದ ಮಂದಿಗೆ ಸಹಿ ಹಾಕುವುದನ್ನು ಕಲಿಸಿಕೊಟ್ಟ ವಿದ್ಯಾರ್ಥಿಗಳು!

ಹೊಸದಿಗಂತ ವರದಿ ಮಡಿಕೇರಿ:

ಅಕ್ಷರದ ಜ್ಞಾನವೇ ಇಲ್ಲದೆ ಕಾಡಿನಲ್ಲಿ ನೆಲೆ ನಿಂತು ಕೂಲಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಗಿರಿಜನ ಹಾಡಿ ಜನರಿಗೆ ಮಂಗಳವಾರ ಅಕ್ಷರದ ಪರಿಚಯವಾಯಿತು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಆದಿವಾಸಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ಪ್ರಯತ್ನ ಮಾಡಿದರು.
ತಿತಿಮತಿ ಗಿರಿಜನರ ಹಾಡಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಸಹಿ ಹಾಕುವುದು ಹೇಗೆ ಎಂದು ಕಾಡಿನ ಮಕ್ಕಳಿಗೆ ಹೇಳಿಕೊಟ್ಟರು. ಹಾಡಿ ಜನ ಮೊದಲ ಅಕ್ಷರ ಅನುಭವದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!