ಹೊಸದಿಗಂತ ವರದಿ, ಕಲಬುರಗಿ:
ವಗಾ೯ವಣೆಗೊಂಡ ಶಿಕ್ಷಕನ ಬಿಳ್ಕೋಡೆಗೆ ಸಮಯದಲ್ಲಿ ಶಿಕ್ಷಕರು ಮತ್ತು ವಿದ್ಯಾಥಿ೯ಗಳು ಗಳಗಳನೆ ಕಣ್ಣಿರು ಹಾಕಿದ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಲಿಂಗಂಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಘವೇಂದ್ರ ಕುಲಕರ್ಣಿ ಅವರ ವಗಾ೯ವಣೆಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಹುದ್ಯೋಗಿ ಶಿಕ್ಷಕರು ಗಳ ಗಳನೇ ಅತ್ತ ಸನ್ನಿವೇಶ ನಡೆದಿದೆ.
ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ಶಿಕ್ಷಕ ಹಾಗೂ ಸಹುದ್ಯೋಗಿ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದ ಕಾರಣ, ವಗಾ೯ವಣೆಗೊಂಡ ಸಂದರ್ಭದಲ್ಲಿ ಈ ಅವಿನಾಭಾವ ಸಂಬಂಧ ಇರುವುದು ಕಂಡುಬಂದಿದೆ.
ನೆಚ್ಚಿನ ಶಿಕ್ಷಕರು ವಗಾ೯ವಣೆಗೊಂಡು,ತೆರಳುವಾಗ, ಮನನೊಂದು ಗಳಗಳನೆ ಕಣ್ಣಿರು ಹಾಕಿ,ವಿದ್ಯಾರ್ಥಿಗಳು ತಮ್ಮ ಪ್ರೀತಿಯನ್ನು ತೋರಿದ್ದಾರೆ. ಇದೀಗ ಈ ವಿಡಿಯೋ ಸೋಸಿಯಲ್ ಮಿಡಿಯಾಗಳಲ್ಲಿ ತುಂಬಾ ವೈರಲ್ ಆಗಿ ಹರಿದಾಡುತ್ತಿದೆ.