Wednesday, August 17, 2022

Latest Posts

ವಿದ್ಯಾರ್ಥಿಗಳು ಹೆದರದೆ ಧೈರ್ಯವಾಗಿ ಬಂದು ಪರೀಕ್ಷೆ ಬರೆಯಬೇಕು: ಶಾಸಕ ರಾಮದಾಸ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮೈಸೂರು:

ಎಸ್‌ಎಸ್‌ಎಲ್ ಸಿ ಪರೀಕ್ಷೆಯನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಡೆಸಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದಕ್ಕೂ ಹೆದರದೆ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆಯನ್ನು ಬರೆಯಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದಕ್ಷಿಣ ವಲಯ ಮೈಸೂರು ವತಿಯಿಂದ ನಗರದ ಗೋಪಾಲಸ್ವಾಮಿ ಶಿಶುವಿಹಾರ ಪ್ರೌಢಶಾಲೆಯಲ್ಲಿ ಗುರುವಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ವಿಭಿನ್ನವಾಗಿ ನಡೆಯುತ್ತಿರುವ ಪರೀಕ್ಷೆಯ ರೂಪರೇಷಗಳು ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳು , ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಕ್ಕಳಿಗೆ ಪ್ರೇರಣಾತ್ಮಕ ನುಡಿಗಳನ್ನು ನುಡಿದರು.
ಸುಮಾರು 18 ವಿದ್ಯಾರ್ಥಿಗಳು ಪರೀಕ್ಷಿಯ ಬಗೆಗೆ ತಮ್ಮಲ್ಲಿದ್ದ ಸಂದೇಹಗಳ ಬಗ್ಗೆ ಶಾಸಕರೊಂದಿಗೆ ಸಂವಾದಿಸಿ ಪರಿಹರಿಸಿಕೊಂಡರು.
ವಿದ್ಯಾರ್ಥಿಗಳ ಹಲವು ಕರೆಗಳನ್ನ ಸ್ವೀಕಾರ ಮಾಡಿದ ಶಾಸಕರು, ಹಲವಾರು ಸಲಹೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಇನ್ನು ಪರೀಕ್ಷೆಗೆ ಕೆಲವೇ ದಿನಗಳಿವೆ. ಈಗ ಹೆಚ್ಚಿನದಾಗಿ ಓದುವ ಬದಲು, ಆ ವಿಷಯಕ್ಕೆ ಸಂಬoಧಪಟ್ಟoತೆ ನಿಮಗೇನು ಗೊತ್ತಿದೆ ಎಂದು ಬರೆಯಬೇಕು. ಆಗ ಪರೀಕ್ಷೆಗೆ ಬಹಳ ಅನುಕೂಲವಾಗುತ್ತದೆ. ಪರೀಕ್ಷೆಯ ಭಯ ಮಕ್ಕಳಲ್ಲಿ ಇರುವುದು ಸಹಜ. ಆದರೆ ನಮ್ಮ ಪರೀಕ್ಷೆಯ ಅಂಕಗಳನ್ನ ಬೇರೆಯವರಿಗೆ ಹೋಲಿಸಕೂಡದು. ನಮ್ಮ ಅಂಕಗಳನ್ನು ನಾವೇ ನಮ್ಮ ಹಿಂದಿನ ಅಂಕಕ್ಕೆ ಹೋಲಿಸಿಕೊಂಡು, ಎಷ್ಟು ಬೆಳವಣಿಗೆ ಆಗಿದೆ ಎಂದು ನೋಡಿಕೊಳ್ಳಬೇಕು. ಆಗ ಮಾತ್ರ ವಿಕಸನವಾಗಲು ಸಾಧ್ಯ. ನಿಮಗೆ ನೀವೇ ಸ್ಪರ್ಧೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪರೀಕ್ಷೆಯ ಸಂದರ್ಭ ಸ್ವಲ್ಪ ಆಹಾರದ ಬಗ್ಗೆ ಗಮನ ಹರಿಸಿಕೊಳ್ಳಬೇಕು. ಹೆಚ್ಚಿನ ಎಣ್ಣೆಯ ಪದಾರ್ಥ, ಶೀತಲ ಪದಾರ್ಥಗಳನ್ನು ತೆಗೆದುಕೊಳ್ಳದೆ, ಹಿತಮಿತವಾದ ಆಹಾರವನ್ನು ಸೇವಿಸಬೇಕು. ಜೊತೆಗೆ ಮುಖ್ಯವಾಗಿ ಚೆನ್ನಾಗಿ ನಿದ್ದೆ ಮಾಡಬೇಕು. ಸೂರ್ಯೋದಯಕ್ಕಿಂತ ಮುಂಚಿತವಾಗಿ ಏಳಲು ಅಭ್ಯಾಸ ಮಾಡಿಕೊಳ್ಳಬೇಕು, ಆಗ ಪೂರ್ತಿ ದಿನ ಲವಲವಿಕೆಯಿಂದ ಇರಲು ಸಾಧ್ಯ ಎಂದು ಸಲಹೆ ನೀಡಿದರು. ಇನ್ನು ಕೆಲವೇ ದಿನಗಳಿವೆ ನಿಮ್ಮ ಪರೀಕ್ಷೆಗೆ. ಹಾಗಾಗಿ ಯಾರನ್ನೋ ಮೆಚ್ಚಿಸಲು, ಅಂಕಗಳನ್ನು ತೆಗೆಯಲು ಮಾತ್ರ ಓದಬೇಡಿ. ಜ್ಞಾನಾರ್ಜನೆ ಮಾಡಲು ಓದಿ. ಪ್ರಧಾನಿ ನರೇಂದ್ರ ಮೋದಿಯವರು ಪರೀಕ್ಷೆಯನ್ನು ಹಬ್ಬದ ರೀತಿ ಆಚರಣೆ ಮಾಡಿ ಎಂದು ಹೇಳಿದ್ದಾರೆ. ಅಂದರೆ ಪರೀಕ್ಷೆ ಎಂದು ಹೆದರದೆ ಇರಿ ಎಂದರ್ಥ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಸರ್ಕಾರ ಪರೀಕ್ಷೆ ನಡೆಸುತ್ತಿದೆ. ಕೋವಿಡ್ ಬಗ್ಗೆ ಹೆದರದೆ ಪರೀಕ್ಷೆಗೆ ಬನ್ನಿ. ಮೈಸೂರು ಶೈಕ್ಷಣಿಕವಾಗಿ ಎತ್ತರಕ್ಕೆ ಏರಲಿ, ಅದಾಗಬೇಕಾದರೆ ನಿಮ್ಮೆಲ್ಲರ ಪ್ರಯತ್ನ ಮುಖ್ಯ. ಎಲ್ಲರಿಗೂ ಶುಭವಾಗಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಾಮಾರಾಧ್ಯ, ಬಿ.ಏರ್.ಸಿ ನಾಗೇಶ್, ಶಿಕ್ಷಣ ಸಂಯೋಜಕ ಮನೋಹರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಕಂಠ ಶಾಸ್ತ್ರೀ , ಸಿ.ಆರ್.ಪಿ ರಾಜು,ಗೋಪಾಲಸ್ವಾಮಿ ಶಾಲೆಯ ಬಾನುಲಿ ಕೇಂದ್ರದ ನಿರ್ದೇಶಕ ಪಾಂಡುರoಗ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!