ಸುಭಾಷ್ ಚಂದ್ರ ಬೋಸ್ ಅಖಂಡ ಭಾರತದ ಮೊದಲ ಪ್ರಧಾನಿ: ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಸುಭಾಷ್ ಚಂದ್ರ ಬೋಸ್ ಅವರು ಅವಿಭಜಿತ ಭಾರತದ ಮೊದಲ ಪ್ರಧಾನಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದು, ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಅವರ ಕೊಡುಗೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಬೇಸರಿಸಿದ್ದಾರೆ.
“ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರ ಮತ್ತು ದೃಷ್ಟಿಕೋನವನ್ನು ಮರು ಮೌಲ್ಯಮಾಪನ ಮಾಡುವ ಅವಶ್ಯಕತೆಯಿದೆ. ಕೆಲವರು ಇದನ್ನು ಇತಿಹಾಸವನ್ನು ಪುನಃ ಬರೆಯುವುದು ಎಂದು ಕರೆಯುತ್ತಾರೆ. ನಾನು ಅದನ್ನು ನೈಜ ಸಂಗತಿಗಳ ತಿದ್ದುಪಡಿ ಎಂದು ಕರೆಯುತ್ತೇನೆ,” ಎಂದು ಅವರು ಹೇಳಿದರು.
ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, “ಆಜಾದ್ ಹಿಂದ್ ಸರ್ಕಾರ್ ಭಾರತದ ಮೊದಲ ಸ್ವದೇಶಿ ಸರ್ಕಾರ. ಇದನ್ನು ಹಾಗೆಂದು ಕರೆಯಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಈ ಸರ್ಕಾರವನ್ನು ರಚಿಸಿ ಅಕ್ಟೋಬರ್ 21, 1943 ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ನಿಟ್ಟಿನಲಲಿ ಅವರೇ ನಮ್ಮ ಮೊದಲ ಪ್ರಧಾನಿ ಎಂದು ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.
“ಸ್ವತಂತ್ರ ಭಾರತದಲ್ಲಿ ಬೋಸ್ ಅವರ ಕೊಡುಗೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಯಿತು. ಅವರಿಗೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ಎಂದಿಗೂ ಸಾರ್ವಜನಿಕಗೊಳಿಸದ ಹಾಗೆ ಇಡಲಾಗಿದೆ” ಎಂದು ಸಿಂಗ್ ಹೇಳಿದರು.
“2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಅರ್ಹವಾದ ಗೌರವವನ್ನು ನೀಡಲು ಪ್ರಾರಂಭಿಸಿದರು.” ಎಂದು ಹೇಳಿದ ಸಿಂಗ್, ಮೋದಿ ಪ್ರಧಾನಿಯಾದ ಬಳಿಕ ಬೋಸ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಅವರಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ದಾಖಲೆಗಳನ್ನು ವರ್ಗೀಕರಿಸಲಾಗಿದೆ. ಮತ್ತು ಭಾರತದ ಜನರಿಗೆ ಅರ್ಪಿಸಲಾಯಿತು. “ಕೆಲವೊಮ್ಮೆ ಜನರು ನೇತಾಜಿ ಬಗ್ಗೆ ತಮನಗೆ ತಿಳಿದಿಲ್ಲದ ಎಷ್ಟೊಂದು ವಿಚಾರಗಲಿವೆ ಎಂದು ಆಶ್ಚರ್ಯ ಪಡುತ್ತಾರೆ. ಹೆಚ್ಚಿನ ಭಾರತೀಯರು ಅವರನ್ನು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿ, ಆಜಾದ್ ಹಿಂದ್ ಫೌಜ್‌ನ ಸರ್ವೋಚ್ಚ ಕಮಾಂಡರ್ ಆಗಿ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಹಲವಾರು ತೊಂದರೆಗಳನ್ನು ಅನುಭವಿಸಿದ ಕ್ರಾಂತಿಕಾರಿ ಎಂದು ತಿಳಿದಿದ್ದಾರೆ. ಆದರೆ ಕೆಲವೇ ಕೆಲವು ಜನರು ಅವರು ಅವಿಭಜಿತ ಭಾರತದ ಮೊದಲ ಪ್ರಧಾನಿ ಎಂಬ ವಿಚಾರವನ್ನು ತಿಳಿದಿದ್ದಾರೆ ಎಂದು ರಾಜ್‌ ನಾಥ್‌ ಸಿಂಗ್‌ ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!