ಸ್ಯಾಂಡ್‌ವಿಚ್‌ನಲ್ಲಿ ಕ್ರೀಮ್‌ ಹೆಚ್ಚಾಗಿದೆ ಎಂದು ವೇಟರ್‌ಗೆ ಗುಂಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಂದು ಸಣ್ಣ ವಿವಾದವು ಜೀವವನ್ನೇ ತೆಗೆದಿದೆ. ಅಮೆರಿಕಾದಲ್ಲಿ ಬಂದೂಕು ದಾಳಿಗಳು ಯಾವುದಾದರೊಂದು ರೂಪದಲ್ಲೀ ನಡೆಯುಯತ್ತಲೇ ಇವೆ. ಇದೀಗ ಸ್ಯಾಂಟ್‌ವಿಚ್‌ನಲ್ಲಿ ಕ್ರೀಮ್‌ ಹೆಚ್ಚಾಗಿದೆ ಎಂದು ಮಹಿಳೆಯನ್ನು ಕೊಲೆ ಮಾಡಿರುವ ದಾರುಣ ಘಟನೆ ಅಮೆರಿಕದ ಅಟ್ಲಾಂಟಾದಲ್ಲಿ ನಡೆದಿದೆ.

36 ವರ್ಷದ ವ್ಯಕ್ತಿಯೊಬ್ಬರು ಅಟ್ಲಾಂಟಾದ ಸಬ್‌ವೇ ರೆಸ್ಟೋರೆಂಟ್‌ನಲ್ಲಿ ಸ್ಯಾಂಡ್ವಿಚ್ ಅನ್ನು ಆರ್ಡರ್ ಮಾಡಿದರು. ಅಲ್ಲಿದ್ದ ಮಹಿಳೆ ವೇಟರ್‌ ಕೆಲ ಹೊತ್ತಿನ ಬಳಿಕ ಸ್ಯಾಂಡ್‌ವಿಚ್‌ ಸರ್ವ್‌ ಮಾಡಿದ್ದಾರೆ. ಆದರೆ, ಅದರಲ್ಲಿ ಮಯೋ (ಮೊಟ್ಟೆಯ ಹಳದಿ ಮತ್ತು ಎಣ್ಣೆಯಿಂದ ಮಾಡಿದ ಬೆಣ್ಣೆಯ ಕ್ರೀಮ್) ಹೆಚ್ಚಾಗಿದೆ ಎಂದು ಮಹಿಳಾ ವೇಟರ್‌ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

ಆಕೆ ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಬಗ್ಗದ ಆ ವ್ಯಕ್ತಿ ಗನ್‌ ತೆಗೆದು ಇಬ್ಬರು ಮಹಿಳಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾನೆ. 26 ವರ್ಷದ ಮಹಿಳಾ ಸರ್ವರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ 24 ವರ್ಷದ ಮಹಿಳಾ ಸರ್ವರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.

ಮೃತ ಮಹಿಳಾ ಸರ್ವರ್ ಐದು ವರ್ಷದ ಮಗನೂ‌ ಜೊತೆಯಲ್ಲೇ ಇದ್ದ. ಕಣ್ಣೆದುರೇ ತಾಯಿಯ ಸಾವು ಕಂಡ ಮಗುವಿನ ಕಣ್ಣೀರು ಎಲ್ಲರ ಹೃದಯ ಕಲುಕುವಂತೆ ಮಾಡಿದೆ. ರೆಸ್ಟೋರೆಂಟ್ ಮಾಲೀಕರ ಮಾಹಿತಿ ಮೇರೆಗೆ ಅಲ್ಲಿಗೆ ತಲುಪಿದ ಪೊಲೀಸರು ದುಷ್ಕೃತ್ಯ ಎಸಗಿದ ಗ್ರಾಹಕರನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!