ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಅಭಿವೃದ್ಧಿಯನ್ನು 20 ವರ್ಷ ಹಿಂದಕ್ಕೆ ಕೊಂಡೊಯ್ದ ಬಜೆಟ್ ಇದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಇದೆಂಥಾ ಬಜೆಟ್ ? ರೈತರ ಪರವಾಗಂತೂ ಇಲ್ಲ, ಇತ್ತೀಚೆಗಷ್ಟೇ ದೆಹಲಿಯಲ್ಲಿ ರಾಜ್ಯದ ಮರ್ಯಾದಿ ಹರಾಜು ಹಾಕಿದ್ರು. ಈ ಬಜೆಟ್ ಕೂಡ ಹಾಗೇ ಇದೆ. ಅಭಿವೃದ್ಧಿ ಇಲ್ಲ. ಬರೀ ಸಾಲ ಮಾಡಿದ್ದಾರೆ.
ನೇಕಾರರಿಗೆ ಏನು ಕೊಟ್ಟಿದ್ದಾರೆ? ಉತ್ತರ ಕರ್ನಾಟಕದ ಜನರ ಕಥೆ ಏನು? ಬರಗಾಲದಲ್ಲಿ ನೀರಾವರಿಗೆ ಸಂಬಂಧಿಸಿದ ಏನೂ ಇಲ್ಲ. ಈ ಬಜೆಟ್ ಬಗ್ಗೆ ಹೆಮ್ಮೆಯಿಲ್ಲ ಎಂದಿದ್ದಾರೆ.