Thursday, August 18, 2022

Latest Posts

ಸುಡಾನ್​ನಲ್ಲಿ ಕ್ಷಿಪ್ರಕ್ರಾಂತಿ: ಸೆರೆಮನೆಗೆ ಪ್ರಧಾನಿ, ಸಚಿವರು, ಇಂಟರ್ನೆಟ್​ ಸೇವೆ ಸ್ಥಗಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಡಾನ್​ನ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಸೋಮವಾರ ಬಂಧಿಸಿ ಸೆರೆಮನೆಗೆ ಕಳುಹಿಸಿದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ.‌
ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಚಿವಾಲಯದ ಫೇಸ್​ಬುಕ್​​ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಇಂಟರ್ನೆಟ್​ ಹಾಗೂ ದೂರವಾಣಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಸುಡಾನ್​ ಪ್ರಧಾನಿ ಅಬ್ದಲ್ಲಾ ಹಮ್​ಡೋಕ್​ ಪ್ರಸ್ತುತ ಎಲ್ಲಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ನಡುವೆ ದೇಶದ ನ್ಯೂಸ್​ ಚಾನೆಲ್​ ದೇಶಭಕ್ತಿಯ ಸಾಂಪ್ರದಾಯಿಕ ಸಂಗೀತ ಹಾಗೂ ನೈಲ್​​ ನದಿಯ ಸೀನ್​ಗಳನ್ನು ಪ್ರಸಾರ ಮಾಡಿದೆ.
ದೇಶದ ಪ್ರಮುಖ ಪ್ರಜಾಪ್ರಭುತ್ವ ಗುಂಪು ಹಾಗೂ ಅತಿದೊಡ್ಡ ರಾಜಕೀಯ ಪಕ್ಷವು ಸ್ಪಷ್ಟವಾದ ಸೇನಾ ದಂಗೆಯನ್ನು ಎದುರಿಸಲು ಜನರಿಗೆ ಬೀದಿಗಿಳಿಯುವಂತೆ ಕರೆ ನೀಡಿದೆ. ಸಾವಿರಾರು ಜನರು ಖಾರ್ಟೂಮ್​ ಹಾಗೂ ಓಮ್ದುರ್ಮಾನ್​​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಜನರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಬಳಕೆ ಮಾಡಿದ್ದಾರೆ ಹಾಗೂ ಇದರಿಂದ ಕೋಪಗೊಂಡ ಪ್ರತಿಭಟನಾಕಾರು ಬೀದಿಗಳಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಎಲ್ಲಾ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!