ಹೊಸದಿಗಂತ ವರದಿ, ಉಡುಪಿ:
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಹಲವಾರು ಎಕರೆ ಪ್ರದೇಶದಲ್ಲಿ ಗಿಡಮರಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ಇಂದು ರಾತ್ರಿ ಬ್ರಹ್ಮಾವರದ ದೂಪದಕಟ್ಟೆ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅನಾಹುತ ಉಂಟಾಗಿದೆ. ಪರಿಣಾಮ ಸ್ಥಳದಲ್ಲಿ ತೀವ್ರವಾಗಿ ಬೆಂಕಿ ಹರಡಿದೆ. ಭಾರೀ ಗಾಳಿಯು ಬೀಸುತ್ತಿರುವುದರಿಂದ ಅದರ ತೀವ್ರತೆಗೆ ಬೆಂಕಿ ಪರಿಸರದಲ್ಲೆಲ್ಲ ಹಬ್ಬಿದೆ. ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ, ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.