ನೇತ್ರಾವತಿ ನೀರಿನಮಟ್ಟ ದಿಢೀರ್ ಏರಿಕೆ: ಅಪಾಯದ ಕರೆಗಂಟೆ ಬಾರಿಸಿದೆ ಜೀವನದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜೀವನದಿ ನೇತ್ರಾವತಿ 6.5 ಮೀಟರ್ ಅಪಾಯಮಟ್ಟದಲ್ಲಿ ಹರಿಯುತ್ತಿದೆ.

ನದಿ ನೀರಿನಲ್ಲಿ ಸತತವಾಗಿ ಏರಿಕೆಯಾಗುತ್ತಿದ್ದು, ಅಪಾಯದ ಕರೆಗಂಟೆ ಬಾರಿಸಿದೆ. ಶನಿವಾರ ಬೆಳಗ್ಗೆ 6.3 ಮಿ.ಎತ್ತರದಲ್ಲಿದ್ದ ನೀರಿನ‌ಮಟ್ಟ ಸಂಜೆ ದಿಢೀರ್ ಏರಿಕೆಯಾಗುತ್ತಾ ಸಾಗಿದ್ದು, ಭಾನುವಾರ ಬೆಳಿಗ್ಗೆ 6 ಗಂಟೆಯ ವೇಳೆಗೆ 8.5 ಮಿ.ಎತ್ತರದಲ್ಲಿ ಅಪಾಯದ ಮಟ್ಟ ತಲುಪಿದೆ.

ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲೂ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!