ಇದ್ದಕ್ಕಿದ್ದಂತೆಯೇ ತೂಕ ಹೆಚ್ಚಾಗ್ತಿದ್ಯಾ? ಈ ಅಭ್ಯಾಸವೂ ಅದಕ್ಕೆ ಕಾರಣವಾಗಿರಬಹುದು..

ಎಲ್ಲವೂ ಮಾಮೂಲಿಯಂತೆಯೇ ಇದೆ. ಆದರೆ ತೂಕ ಮಾತ್ರ ಹೆಚ್ಚುತ್ತಿದೆ. ಕಾರಣ ಇಲ್ಲದೆ ತೂಕ ಹೆಚ್ಚಾಯ್ತು ಎಂದುಕೊಳ್ಳಬೇಡಿ. ಕಾರಣ ಇಲ್ಲದೆ ಏನೂ ಆಗುವುದಿಲ್ಲ. ತೂಕ ಹೆಚ್ಚಳ ಆಗೋದು ಯಾಕೆ ಗೊತ್ತಾ?

ಸದಾ ನೀವು ಒತ್ತಡದಲ್ಲಿದ್ದರೆ ದೇಹದ ತೂಕ ಹೆಚ್ಚಾಗುತ್ತದೆ. ಒಂಟಿತನದಿಂದ ಖಿನ್ನತೆಗೊಳಗಾದವರಲ್ಲಿ ತೂಕ ಹೆಚ್ಚಳ ಆಗುತ್ತದೆ.

ಒತ್ತಡ ಎಲ್ಲರ ಜೀವನದ ದೊಡ್ಡ ಶತ್ರು. ಒತ್ತಡ ನಿವಾರಣೆಯಾಗದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಒತ್ತಡದಿಂದ ತೂಕವೂ ಹೆಚ್ಚಾಗಲಿದೆ.

ಥೈರಾಯ್ಡ್ ಸಮಸ್ಯೆಯಿಂದಲು ತೂಕ ಹೆಚ್ಚಳ ಆಗುತ್ತದೆ. ಥೈರಾಯ್ಡ್‌ನ ಏರಿಳಿತದಿಂದ ತೂಕದಲ್ಲಿ ಬದಲಾವಣೆ ಆಗುತ್ತದೆ.

ಸಣ್ಣ ಪುಟ್ಟ ಸಮಸ್ಯೆಗಳಿಗೂ ಟಕ್ಕೆಂದು ಹೋಗಿ ಮಾತ್ರೆ ಕುಡಿದುಬಿಡುತ್ತೀರಾ? ಅನಾವಶ್ಯಕವಾಗಿ ಮಾತ್ರೆ ಸೇವಿಸಿದರೆ ಅದೂ ಕೂಡ ನಿಮ್ಮ ತೂಕ ಹೆಚ್ಚಾಗಿಸುತ್ತದೆ. ಆದಷ್ಟು ಮಾತ್ರೆಗಳಿಂದ ದೂರ ಇರಿ.

ಆಹಾರದಲ್ಲಿ ಹಾಕಿರುವ ಬಣ್ಣಗಳಿಂದಲೂ ತೂಕ ಹೆಚ್ಚಳವಾಗುತ್ತದೆ. ನೋಡಲು ಚೆನ್ನಾಗಿ ಕಾಣುವಂತೆ ಮಾಡಲು ವಿಧವಿಧದ ಬಣ್ಣಗಳ ಬಳಕೆ ಮಾಡಲಾಗುತ್ತದೆ. ಇದರಿಂದಲೂ ತೂಕ ಹೆಚ್ಚಳವಾಗುತ್ತದೆ.

ಕೂತಲ್ಲಿಯೇ ಕೂತು ಕೆಲಸ ಮಾಡುವುದರಿಂದ ದೈಹಿಕ ಚಟುವಟಿಕೆ ಇಲ್ಲದೆ ತೂಕ ಹೆಚ್ಚುತ್ತದೆ.

ಆಹಾರ ಕ್ರಮ ಸರಿಯಿಲ್ಲದೆ, ಜಂಕ್ ಫುಡ್ ತಿನ್ನುವ ಅಭ್ಯಾಸದಿಂದ ತೂಕ ಹೆಚ್ಚುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!