ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿರೂಪಣೆಯಿಂದ ಹಿಂದೆ ಸರಿದ ಕಿಚ್ಚ ಸುದೀಪ್.. ಇನ್ಮುಂದೆ ಬಿಗ್ ಬಾಸ್ ಕಥೆ ಏನು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಜನರಿಗೆ ಯಾಕೆ ಬಿಗ್ ಬಾಸ್ ನೋಡ್ತೀರಾ ಅಂದ್ರೆ ಮೊದಲು ಹೇಳೋದು ಸುದೀಪ್ ಅವರಿಗೋಸ್ಕರ ನಂತರ ಉಳಿದ ರೀಸನ್ಸ್..
ಆದರೆ ಈ ವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಕಾಣಿಸೋದಿಲ್ಲ..
ಹೌದು… ಸುದೀಪ್ ಅವರಿಗೆ ಆರೋಗ್ಯ ಸಮಸ್ಯೆ ಇದ್ದು, ಈ ವೀಕೆಂಡ್ ಶೂಟಿಂಗ್ ಕ್ಯಾನ್ಸಲ್ ಆಗಿದೆ. ಈ ಬಗ್ಗೆ ಖುದ್ದು ಸುದೀಪ್ ಅವರೇ ಟ್ವೀಟ್ ಮಾಡಿದ್ದಾರೆ.


ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ವಾರಾಂತ್ಯದೊಳಗೆ ಆರೋಗ್ಯ ಸುಧಾರಿಸುತ್ತದೆ ಎಂದು ಅಂದಾಜಿಸಿದ್ದೆ. ಆದರೆ ವೈದ್ಯರು ರೆಸ್ಟ್ ಮಾಡಲೇಬೇಕು ಎಂದಿದ್ದಾರೆ. ಹಾಗಾಗಿ ಈ ವಾರದ ವೀಕೆಂಡ್ ಶೋ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬಿಗ್‌ಬಾಸ್‌ನಲ್ಲಿ ಒಳ್ಳೆಯ ಕ್ರಿಯೇಟಿವ್ ಟೀಂ ಇದೆ. ಈ ಬಾರಿ ಎಲಿಮಿನೇಶನ್‌ಗೆ ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಸುದೀಪ್ ಹೇಳಿದ್ದಾರೆ.
ವಾರದ ಕೊನೆಯಲ್ಲಿ ಕಿಚ್ಚ ಬರದಿದ್ರೆ ಬಿಗ್‌ಬಾಸ್ ಬೋರು ಅನ್ನೋ ಅಭಿಮಾನಿಗಳ ಮಧ್ಯೆ ಕಿಚ್ಚ ಇಲ್ಲದೆ ಶೋ ಹೇಗೆ ಮಾಡಬಹುದು ಅನ್ನೋ ಕುತೂಹಲ ಇರುವ ಅಭಿಮಾನಿಗಳು ಇದ್ದಾರೆ. ವಾರಾಂತ್ಯದಲ್ಲಿ ಏನಾಗತ್ತೆ ಅನ್ನೋದಕ್ಕೆ ಕಾಯೋದು ಬಿಟ್ಟೆ ಬೇರೆ ದಾರಿ ಇಲ್ಲ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss