ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ತಾರಾ ಜೋಡಿ ರಿತೇಶ್ ದೇಶ್ಮುಖ್ ಹಾಗೂ ಜೆನಿಲಿಯಾಗೆ ನಟ ಕಿಚ್ಚ ಸುದೀಪ್ ಶುಭಾಶಯ ಕೋರಿದ್ದಾರೆ.
ಹೌದು, 20 ವರ್ಷಗಳ ಆಕ್ಟಿಂಗ್ ಕೆರಿಯರ್ ನಂತರ ರಿತೇಶ್ ಇದೀಗ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕುತ್ತಿದ್ದು, ಸುದೀಪ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.
20 ವರ್ಷ ತೆರೆಯ ಮೇಲೆ ಕಾಣಿಸಿದ್ದೆ. ಇದೀಗ ತೆರೆಯ ಹಿಂದೆ ನಿಂತು ನಿರ್ದೇಶನ ಮಾಡಲು ಇಚ್ಛಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ರಿತೇಶ್ ಟ್ವೀಟ್ ಮಾಡಿದ್ದು, ಇದಕ್ಕೆ ಸುದೀಪ್ ಸಿಹಿ ಸುದ್ದಿ ಕೇಳಿ ಖುಷಿಯಾಯ್ತು. ನಿರ್ದೇಶನ ಮಾಡುವ ಎಲ್ಲ ಶಕ್ತಿ ನಿನ್ನಲಿದೆ. ಈ ನಿರ್ಧಾರಕ್ಕೆ ನೀವು ಬಂದಿರೋದು ನನಗೆ ಖುಷಿ ವಿಷಯ. ರಿತೇಶ್ ಎನರ್ಜಿಯನ್ನು ಹೆಚ್ಚು ಮಾಡ್ತಿರೋದು ಜೆನಿಲಿಯಾ ಇಬ್ಬರಿಗೂ ಆಲ್ ದಿ ಬೆಸ್ಟ್, ನಿಮ್ಮ ಸಿನಿಮಾ ನೋಡಲು ನಾನು ಎಕ್ಸೈಟ್ ಆಗಿದ್ದೇನೆ ಎಂದು ಹೇಳಿದ್ದಾರೆ.