ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಜನ್ಮದಿನ. 50 ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ ಅವರಿಗೆ ಚಿತ್ರರಂಗದ ಗಣ್ಯರು ವಿಶ್ ಮಾಡಿದ್ದಾರೆ.
ಚಂದನವನದ ತಾರೆಯರಷ್ಟೇ ಅಲ್ಲದೆ ಬಾಲಿವುಡ್, ಟಾಲಿವುಡ್ ನಟ-ನಟಿಯರು ಸುದೀಪ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಕೊರೋನಾ ಕಾರಣದಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುವುದಿಲ್ಲ ಎಂದು ಸುದೀಪ ಈ ಮುನ್ನವೇ ಹೇಳಿದ್ದರು. ಎಲ್ಲ ಪರಿಸ್ಥಿತಿ ಸರಿಯಾದ ನಂತರ ಎಲ್ಲರೂ ಸೇರೋಣ ಎಂದು ಹೇಳಿ ಅಭಿಮಾನಿಗಳನ್ನು ಸಂತೈಸಿದ್ದರು. ಅಂತೆಯೇ ಅಭಿಮಾನಿಗಳು ಸುದೀಪ ಅವರ ಹೆಸರಿನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಸಿನಿಮಾ ಫೀಲ್ಡ್ನಿಂದ ಈ ಬಾರಿ ಸುದೀಪ ಅವರ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ವಿಕ್ರಾಂತ್ ರೋಣ ಕಡೆಯಿಂದ ಡೆಡ್ ಮ್ಯಾನ್ ಆಂಥಮ್ ರಿಲೀಸ್ ಆಗುತ್ತಿದೆ.ಜೊತೆಗೆ ಸುದೀಪ ಅವರ ಕುರಿತು ಪತ್ರಕರ್ತ ಡಾ.ಶರಣು ಹುಲ್ಲೂರು ಅವರು ಬರೆದ ಕನ್ನಡ ಮಾಣಿಕ್ಯ ಕಿಚ್ಚ ಪುಸ್ತಕ ಇಂದು ಆಡಿಯೋ ಹಾಗೂ ಇ-ಬುಕ್ ರೂಪದಲ್ಲಿ ತೆರೆ ಕಾಣಲಿದೆ.