CINE | ಕಪಿಲ್ ಶರ್ಮಾ ಶೋನಲ್ಲಿ ಸುಧಾ ಮೂರ್ತಿ, ಹೆಚ್ಚಾಯ್ತು ಕುತೂಹಲ

ಹೊಸದಿಗಂತ ಡಿಜಿಡಲ್ ಡೆಸ್ಕ್:

ಹಿಂದಿಯ ಜನಪ್ರಿಯ ಕಾರ್ಯಕ್ರಮ ಕಪಿಲ್ ಶರ್ಮಾ ಶೋನಲ್ಲಿ ಈ ಬಾರಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಕಾಣಿಸಿಕೊಂಡಿದ್ದಾರೆ.

ಕೆಲವೇ ದಿನಗಳ ಹಿಂದೆ ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿದ್ರು, ಈ ಹಿಂದೆ ಸುದೀಪ್ ಕೂಡ ಕಾಣಿಸಿದ್ದಾರೆ. ಇದೀಗ ಸುಧಾ ಮೂರ್ತಿ ಅವರು ಕಾಣಿಸಿದ್ದು, ಅವರ ಜೊತೆ ರವೀನಾ ಟಂಡನ್ ಕೂಡ ಇರಲಿದ್ದಾರೆ.

ಕಾಮಿಡಿ ಶೋಗಳಲ್ಲಿ ಸುಧಾಮೂರ್ತಿ ಅವರು ಕಾಣಿಸೋದು ಅತಿ ವಿರಳ, ಹಾಗಾಗಿ ಕನ್ನಡಿಗರಿಗೆ ಈ ಸಂಚಿಕೆ ತುಂಬಾನೇ ಸ್ಪೆಷಲ್ ಆಗಿ ಕಾಣಿಸಿದೆ. ಈಗಿನ್ನೂ ಕಾರ್ಯಕ್ರಮದ ಪ್ರೋಮೋ ಅಷ್ಟೇ ರಿಲೀಸ್ ಆಗಿದ್ದು, ವೀಕೆಂಡ್‌ನಲ್ಲಿ ಸಂಚಿಕೆ ಪ್ರಸಾರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!