ಸಾವಿನಲ್ಲೂ ಸಾರ್ಥಕತೆ, ನೇತ್ರದಾನ ಮಾಡಿದ ಹಿರಿಯ ನಿರ್ದೇಶಕ ಭಗವಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ನಿಧನರಾದ ಕನ್ನಡದ ಹಿರಿಯ ನಿರ್ದೇಶಕ ಭಗವಾನ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ, ಇದರಿಂದಾಗಿ ನಾಲ್ಕು ಜನರಿಗೆ ದೃಷ್ಟಿ ಬರಲಿದೆ.

ವರನಟ ಡಾ. ರಾಜ್‌ಕುಮಾರ್ ಅವರು ನೇತ್ರದಾನ ಮಾಡಿಸಲು ನೋಂದಣಿ ಮಾಡಿಸಿದ ಸಮಯದಲ್ಲಿಯೇ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಅವರೂ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಮರಣಾನಂತರ ಕಾರ್ನಿಯಾವನ್ನು ತೆಗೆಯಲಾಗಿದೆ.

ಭಗವಾನ್ ಅವರಿಗೆ 90 ವರ್ಷ ವಯಸ್ಸಾಗಿದ್ದರೂ ಅವರ ಕಾರ್ನಿಯಾ ಆರೋಗ್ಯಕರವಾಗಿದೆ ಎಂದು ನಾರಾಯಣ ನೇತ್ರಾಲಯದ ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!