ರಾಜ್ಯದಲ್ಲಿ ಸಕ್ಕರೆ ನಾಡು ಮಂಡ್ಯ ಅಲ್ಲ, ಬೆಳಗಾವಿ: ಸಚಿವ ಬಿ.ಸಿ ಪಾಟೀಲ್

ಹೊಸದಿಗಂತ ವರದಿ,ಚಿಕ್ಕೋಡಿ:

ದೇಶದ ಪ್ರಧಾನಿ ಮೋದಿ ಅವರು ಕೃಷಿಗೆ ೧ ಲಕ್ಷ ಕೋಟಿ ಪ್ರತ್ಯೇಕ ಹಣ ಮೀಸಲಿಟ್ಟಿದ್ದಾರೆ. ರೈತ ಆದಾಯ ದ್ವಿಗುಣ ನಿಟ್ಟಿನಲ್ಲಿ ಸ್ವಂತ ಖಾದ್ಯ ತೈಲೋತ್ಪಾದನೆಗೆ ಒತ್ತು ನೀಡಲಾಗುವದು. ರಾಜ್ಯದಲ್ಲಿ ಮಂಡ್ಯ ಕಿಂತಲು ಹೆಚ್ಚು ಸಕ್ಕರೆ ಕಾರ್ಖಾನೆ ಉಳ್ಳ ಸಕ್ಕರೆ ನಾಡು ಬೆಳಗಾವಿ ಎಂದು ಕೃಷಿ ಸಚಿವ ಸಿ.ಸಿ ಪಾಟೀಲ ಹೇಳಿದರು.

ತಾಲೂಕಿನ ಅಂಕಲಿ ಗ್ರಾಮದ ಶಿವಾಲಯ ದಲ್ಲಿ ಸೋಮವಾರ ಜರುಗುವ ಸೋಯಾಬೀನ್ ಹಾಗೂ ಕಬ್ಬು ಬೆಳೆಯುವ ರೈತರ, ವಿಜ್ಞಾನಿಗಳ ಮತ್ತು ಉದ್ಯಮಿಗಳ ಸಮ್ಮೇಳನಕ್ಕೆ ಸಮೃದ್ಧಿಯ ಸಂಕೇತವಾದ ಮಡಿಕೆಗಳಿಗೆ ಕಾಳು ಹಾಕುವ ಮೂಲಕ ಚಾಲನೆ ನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಕೆ.ಎಲ್.ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ , ಬೆಂಗಳೂರು ಐಸಿಎಆರ್- ಅಟಾರಿ ನಿರ್ದೇಶಕ ಡಾ. ವಿ. ವೆಂಕಟಸುಭ್ತಮಣಿಯನ್, ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಬಿ. ಆರ್ ಪಾಟೀಲ, ಮಹಾಂತೇಶ ಕವಟಗೀಮಠ, ಸಿ.ಬಿ ಕೋರೆ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಭರತ ಬನವಣೆ ಸೇರಿ ಹಲವು ಗಣ್ಯರು ವೇದಿಕೆಮೇಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!