Thursday, August 18, 2022

Latest Posts

ಭಾರತಕ್ಕೆ ಮತ್ತೊಂದು ಪದಕ: ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದ ಸುಹಾಸ್ ಎಲ್.ಯತಿರಾಜ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ, ಕನ್ನಡಿಗ ಸುಹಾಸ್ ಎಲ್. ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಇಂದು ನಡೆದ ಬ್ಯಾಡ್ಮಿಂಟನ್ ಫೈನಲ್ಸ್ ನಲ್ಲಿ ಫ್ರಾನ್ಸ್ ನ ಲೂಕಸ್ ಮಜುರ್ ವಿರುದ್ಧ ಸೋಲೊಪ್ಪಿಕೊಂಡಿದ್ದು, ಬೆಳ್ಳಿಪದಕಕ್ಕೆ ಮುತ್ತಿಡಲಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ. ಭಾರತಕ್ಕೆ 4 ಚಿನ್ನ,7 ಬೆಳ್ಳಿ, 7 ಕಂಚಿನ ಪದಕ ಸಿಕ್ಕಿವೆ.
ಫ್ರಾನ್ಸ್ ನ ಲೂಕಸ್ ವಿರುದ್ಧ ಮೊದಲ ಸೆಟ್ ನಲ್ಲಿ 21-15 ಅಂತರದಲ್ಲಿ ಗೆಲುವು ಸಾಧಿಸಿದ್ದ ಸುಹಾಸ್, ಎರಡು ಹಾಗೂ ಮೂರನೇ ಸೆಟ್ ನಲ್ಲಿ ಹಿನ್ನೆಡೆ ಸಾಧಿಸುವ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ.
ಪ್ರಮೋದ್ ಭಗತ್ ಜಪಾನ್‌ನ ಡೈಸುಕೆ ಫುಜಿಹಾರ ಅವರನ್ನು 21-11, 21-16 ರಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಸುಹಾಸ್ ಯತಿರಾಜ್ 2007 ರ ಬ್ಯಾಚ್ ಐಎಎಸ್ ಆಧಿಕಾರಿಯಾಗಿದ್ದು, ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!