ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವನದಲ್ಲಿ ಜುಗುಪ್ಸೆ ಹೊಂದಿದ ಎಷ್ಟೋ ಮಂದಿ ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಕ್ಯಾಲಿಫೋರ್ನಿಯಾದಲ್ಲಿ ಯಂತ್ರವೊಂದನ್ನು ತಯಾರಿಸಲಾಗಿದೆ.
ಈ ಯಂತ್ರದಲ್ಲಿ ಕುಳಿತರೆ ಯಾವ ನೋವು ಇಲ್ಲದೇ ಒಂದೇ ನಿಮಿಷದಲ್ಲಿ ಸಾವು ಸಂಭವಿಸುತ್ತದೆ.
ಕಾನೂನು ಬದ್ಧವಾಗಿಯೇ ತಯಾರಾದ ಈ ಯಂತ್ರಕ್ಕೆ ಸಾರ್ಕೋ ಎಂದು ಹೆಸರಿಡಲಾಗಿದೆ. ನೋಡೋದಕ್ಕೂ ಇದು ಶವದ ಪೆಟ್ಟಿಗೆ ರೀತಿ ಇದೆ.
ಕೆಲಸ ಮಾಡೋದು ಹೇಗೆ?
ಆತ್ಮಹತ್ಯೆಗೆ ಯತ್ನಿಸುವವರು ಇದರೊಳಗೆ ಕುಳಿತರೆ ಒಂದೇ ನಿಮಿಷದಲ್ಲಿ ಸಾವು ಸಂಭವಿಸುತ್ತದೆ. ಈ ಯಂತ್ರ 3 ಡಿ ಮುದ್ರಿತ ಕ್ಯಾಪ್ಸುಲ್ಗಳಿಂದ ತಯಾರಾಗಿದೆ. ಇದರೊಳಗೆ ಕುಳಿತ ತಕ್ಷಣ ಆಮ್ಲಜನಕ ಕಡಿಮೆಯಾಗಿ ಹೈಪೋಕ್ಸಿಯಾ ಮತ್ತು ಹೈಪೋಕಾಪ್ನಿಯಾ ಉಂಟಾಗಿ ವ್ಯಕ್ತಿ ನಿಮಿಷದಲ್ಲಿ ಉಸಿರು ನಿಲ್ಲಿಸುತ್ತಾನೆ. ಮಲಗಿದಾಗ ಯಂತ್ರವು ಪ್ರಶ್ನೆಗಳನ್ನು ಕೇಳುತ್ತದೆ. ಅದಕ್ಕೆ ಉತ್ತರಗಳನ್ನು ನೀಡುತ್ತಾ ಬಟನ್ ಪ್ರೆಸ್ ಮಾಡಬೇಕು. ನಂತರ ಆಮ್ಲಜನಕ ಕಡಿಮೆಯಾಗುತ್ತಾ ಹೋಗುತ್ತದೆ.
ಬದುಕಿನಲ್ಲಿ ಸಾವಿರಾರು ಸಮಸ್ಯೆಗಳಿದ್ದರೂ ಅದಕ್ಕೆ ಆತ್ಮಹತ್ಯೆ ಖಂಡಿತಾ ಪರಿಹಾರ ಅಲ್ಲ, ಹಿಂದೆ ಇದ್ದ ಎಷ್ಟೋ ಕಷ್ಟದ ಸಂದರ್ಭದಲ್ಲಿ ಸಾಯಬೇಕು ಎಂದು ಅನಿಸಿಯೇ ಇರುತ್ತದೆ. ಆದರೆ ಅದನ್ನೆಲ್ಲ ಮೀರಿ ಇಂದು ಖುಷಿಯಾಗಿದ್ದೇವೆ. ಕೆಟ್ಟ ದಿನಗಳು ಕಳೆದು ಒಳ್ಳೆ ದಿನಗಳು ಬರುತ್ತವೆ ಎಂಬ ನಂಬಿಕೆ ಇರಲಿ ಎನ್ನುವುದು ಕಳಕಳಿಯ ಮನವಿ.