ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ವಿಜಯಪುರ:
ಅತ್ಯಾಚಾರಿ ಆರೋಪಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಯ ಟಾಯ್ಲೆಟ್ ನಲ್ಲಿ ನಡೆದಿದೆ.
ಯಂಕಂಚಿ ನಿವಾಸಿ ಹಾಗೂ ದಿಲ್ದಾರ್ ಡಾಬಾ ಮಾಲೀಕ ದೇವಿಂದ್ರ ಸಂಗೋಗಿ ಆತ್ಮಹತ್ಯೆಗೆ ಶರಣಾದ ಅತ್ಯಾಚಾರಿ ಆರೋಪಿ.
ಇನ್ನು ಯಂಕಂಚಿ ಡಾಬಾದಲ್ಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಆ. 27 ರಂದು ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಕ್ಕಾಗಿ ಆರೋಪಿ ದೇವಿಂದ್ರ ಬಂಧಿಸಿ ತರಲಾಯಿತು. ಆದರೆ, ನಿನ್ನೆ ತಡರಾತ್ರಿ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮಾಹಿತಿ ತಿಳಿಯುತ್ತಿದಂತೆ ಆರೋಪಿಯ ಕುಟುಂಬಸ್ಥರು ಸಿಂದಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಅಲ್ಲದೇ, ಈ ಬಗ್ಗೆ ಜಿಲ್ಲಾ ಎಸ್ಪಿ ಆನಂದಕುಮಾರ ಮಾಹಿತಿ ನೀಡಿದ್ದು, ಅಪ್ರಾಪ್ತೆ ಅತ್ಯಾಚಾರದ ಆರೋಪಿಯೇ ಸಿಂದಗಿ ಠಾಣಾ ಹೊರಗಡೆಯಿರುವ ಟಾಯ್ಲೆಟ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ. ಯಂಕಂಚಿ ನಿವಾಸಿ ದೇವಿಂದ್ರ ಸಂಗೋಗಿ ಆತ್ಮಹತ್ಯೆಗೆ ಶರಣಾದವರು. ಇನ್ನು ಈ ಪ್ರಕರಣವನ್ನು ಹೆಚ್ಚಿನ ತನಿಖೆ ಸಿಐಡಿಗೆ ಒಯಿಸಲು ಚಿಂತನೆ ಮಾಡಲಾಗಿದೆ ಎಂದರು.